ಕಳೆದ ಗುರುವಾರದಿಂದ ರಾಜಕೀಯ ಅಸ್ತವ್ಯಸ್ತತೆಗೆ ಒಳಗಾಗಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್ ನ ಸುಪ್ರೀಂ ಕೋರ್ಟ್ ಒಂಭತ್ತು ಮಂದಿ ವಿರೋಧ ಪಕ್ಷದ ನಾಯಕರನ್ನು ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿತ್ತು. ಸರ್ಕಾರದ ನಡೆ 'ರಾಜಕೀಯ ಪ್ರೇರಿತ' ಹಾಗೂ ದೋಷಪೂರಿತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಆದರೆ ಯಮೀನ್ ಸರ್ಕಾರವು ನ್ಯಾಯಾಲಯ ಆದೇಶವನ್ನು ಜಾರಿಗೊಳಿಸಲು ನಿರಾಕರಿಸಿದ್ದು, ಮಾಲ್ಡೀವ್ಸ್ ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾಗಿದ್ದವು.