ಸೌದಿ ಅರೆಬಿಯ: ಮಹಿಳೆಯರ ವಿಷಯದಲ್ಲಿ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಸೌದಿ ಅರೆಬಿಯದಲ್ಲಿ ಈಗ ಮಹಿಳೆಯರು ಪುರುಷರ ಅನುಮತಿ ಇಲ್ಲದೆಯೇ ಮಹಿಳೆಯರು ಉದ್ಯಮ ಸ್ಥಾಪಿಸಲು ಅನುಮತಿ ದೊರೆತಿದೆ.
ಹೆಚ್ಚು ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಖಾಸಗಿ ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಸರ್ಕಾರ ಮಹಿಳೆಯರಿಗೆ ಈ ಸೌಲಭ್ಯ ಕಲ್ಪಿಸಿದ್ದು, ದಶಕಗಳ ಕಾಲ ಇದ್ದ ಪುರುಷ ಪ್ರಧಾನ ಕಟ್ಟುಪಾಡನ್ನು ಮೀರಲು ಮಹಿಳೆಯರಿಗೆ ಅನುಮತಿ ದೊರೆತಂತಾಗಿದೆ.
ಮಹಿಳೆಯರು ಪತಿ/ತಂದೆಯರ ಅನುಮತಿ ಇಲ್ಲದೇ ತಮ್ಮದೇ ಆದ ಸ್ವಂತ ಉದ್ಯಮವನ್ನು ಸ್ಥಾಪಿಸಬಹುದು ಹಾಗೂ ಸರ್ಕಾರದ ಇ-ಸೇವೆಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಅಲ್ಲಿನ ವಾಣಿಜ್ಯ ಹಾಗೂ ಹೂಡಿಕೆ ಸಚಿವಾಲಯದ ವೆಬ್ ಸೈಟ್ ತಿಳಿಸಿದೆ.
ಈ ಹಿಂದಿನ ಕಾನೂನಿನ ಪ್ರಕಾರ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಮಾಡುವುದಕ್ಕೂ ಸಹ ಮಹಿಳೆಯರು ತಂದೆ, ಪತಿ, ಅಥವಾ ಸಹೋದರರಿಂದ ಅನುಮತಿ ಪತ್ರ ಪಡೆಯಬೇಕಿತ್ತು.