ವಾಷಿಂಗ್ ಟನ್: ತಾಲಿಬಾನ್ ಉಗ್ರ ಸಂಘಟನೆಗಳೊಡನೆ ಯಾವ ಮಾತುಕತೆಗೂ ನಾವು ಸಿದ್ದರಿಲ್ಲ. ಅವರನ್ನು ಸಂಪೂರ್ಣ್ ನಾಶಗೊಳಿಸುವುದೇ ನಮ್ಮ ಏಕೈಕ ಗುರಿ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇತ್ತೀಚೆಗೆ ನಡೆದ ಅಫ್ಘಾನಿಸ್ಥಾನ ಬಾಂಬ್ ದಾಳಿಯ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
"ನಾವು ತಾಲಿಬಾನ್ ಜೊತೆ ಮಾತನಾಡಲು ಬಯಸುವುದಿಲ್ಲ" ವೈಟ್ ಹೌಸ್ ನಲ್ಲಿ ಅಮೆರಿಕದ ರಕ್ಷಣಾ ಕೌನ್ಸಿಲ್ ನ ರಾಯಭಾರಿಗಳೊಡನೆ ಮಾತನಾಡುತ್ತಾ ಅಧ್ಯಕ್ಷ ಟ್ರಂಪ್ ನುಡಿದರು.
"ಅವರು ಮುಗ್ದ ಜನರನ್ನು ಕೊಂದಿದ್ದಾರೆ. ಮಕ್ಕಳು, ಮಹಿಳೆಯರ ಮನೆಗಳ ಮೇಲೆ ಬಾಂಬ್ ಎಸೆದು ಹತ್ಯೆ ಮಾಡಿದ್ದಾರೆ. ಬೇರೆ ಯಾರ ಮೇಲೆಯೂ ದಾಳಿ ನಡೆಸಲು ಸಮರ್ಥರಾಗಿಲ್ಲದ ವೇಳೆ ಮುಗ್ದ , ಅಮಾಯಕ ಜನರ ಮೇಲೆ ದಾಳಿ ನಡೆದಿದೆ" ಎಂದು ಟ್ರಂಪ್ ಹೇಳಿದರು.
ಅಫ್ಘಾನಿಸ್ಥಾನದ ಕಾಬೂಲ್ ನಲ್ಲಿ ಇತ್ತೀಚೆಗೆ ಎಅರ್ಡು ಬಾಂಬ್ ಸ್ಪೋಟ ಸಂಭವಿಸಿದ್ದು ನೂರಾರು ಮಂದಿ ಅಸುನೀಗಿದ್ದರು. ಅದರಲ್ಲಿ ಒಂದು ಬಾಂಬ್ ಸ್ಪೋಟ ಘಟನೆಗಾಗಿ ಅಂಬ್ಯುಲೆನ್ಸ್ ನ್ನು ಬಳಕೆ ಮಾಡಲಾಗಿದ್ದು ಇದರಲ್ಲಿ ಕನಿಷ್ಟ ನೂರು ಮಂದಿ ಪ್ರಾಣ ಕಳೆದುಕೊಂಡಿದ್ದರು.