26/11 ಮುಂಬೈ ದಾಳಿ ಆರೋಪಿ ಡೇವಿಡ್ ಹೆಡ್ಲಿ ಮೇಲೆ ಅಮೇರಿಕಾ ಜೈಲಿನಲ್ಲಿ ಹಲ್ಲೆ, ಐಸಿಯುಗೆ ದಾಖಲು

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಡೇವಿಡ್ ಕೊಲೆಮನ್ ಹೆಡ್ಲಿ ಮೇಲೆ ಅಮೆರಿಕಾದ ಜೈ;ಲಿನಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ.
ಮುಂಬೈ ದಾಳಿಯ ಪ್ರಮುಖ ಆರೊಪಿ  ಡೇವಿಡ್ ಕೊಲೆಮನ್ ಹೆಡ್ಲಿ
ಮುಂಬೈ ದಾಳಿಯ ಪ್ರಮುಖ ಆರೊಪಿ ಡೇವಿಡ್ ಕೊಲೆಮನ್ ಹೆಡ್ಲಿ
ವಾಷಿಂಗ್ಟನ್: 26/11 ಮುಂಬೈ ದಾಳಿಯ ಪ್ರಮುಖ ಆರೊಪಿ  ಡೇವಿಡ್ ಕೊಲೆಮನ್ ಹೆಡ್ಲಿ ಮೇಲೆ ಅಮೆರಿಕಾದ ಜೈ;ಲಿನಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ.  ಸಹ ಖೈದಿಗಳಿಬ್ಬರು ನಡೆಸಿದ ಹಲ್ಲೆಯ ಪರಿಣಾಮ ಹೆಡ್ಲಿ ಚಿಕಾಗೋ ಆಸ್ಪತ್ರೆಯ ತೀವ್ರ ನಿಗಾ ಘಟಕ ( (ಐಸಿಯು) ಗೆ ಸೇರ್ಪಡೆಯಾಗಿದ್ದಾನೆ.
 ಹೆಡ್ಲಿ ಗೆ ಗಂಭೀರ ಗಾಯಗಳಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿದ್ದು ಮಾದ್ಯಮ ವರದಿ ಕುರಿತಂತೆ ಅಮೆರಿಕಾ ಸರ್ಕಾರ ಯಾವ ಪ್ರತಿಕ್ರಿಯೆ ನಿಡಿಲ್ಲ. ಹೆಡ್ಲಿ  ಮೇಲಿನ ದಾಳಿ ಕುರಿತಂತೆ ನಾವು ಯಾವ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ಚಿಕಾಗೋ ಕಾರಾಗೃಹ ಇಲಾಖೆ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಪಾಕಿಸ್ತಾನ ಮತ್ತು ಐಸಿಸ್ ಪರ ಕೆಲಸ ಮಾಡತ್ತಿದ್ದನು ಎಂಬ ಆರೋಪದ ಮೇಲೆ ಸಹಖೈದಿಗಳು ಹೆಡ್ಲಿ ಮೇಲೆ ಹಲ್ಲೆ ನಡೆಸಿದ್ದಾರೆ. ಜುಲೈ 8ರಂದು ಈ ಹಲ್ಲೆ ನಡೆದಿತ್ತು. ಹಲ್ಲೆ ಬಳಿಕ ಗಾಯಗೊಂಡ  ಹೆಡ್ಲಿಯನ್ನು ಇವಾಟ್ಸನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವನ ಸ್ಥಿತಿ ಗಂಭೀರವಾಗಿದೆ ಎಂದು ಮಾದ್ಯಮಗಳು ವರದಿ ಮಾಡಿದೆ.
ಅಮೆರಿಕಾ ಮೂಲದ ಹೆಡ್ಲಿ ಮುಂಬೈನಲ್ಲಿ ನಡೆದ ದಾಳಿಯ ಪ್ರಮುಖ ರೂವಾರಿ. ಪಾಕಿಸ್ತಾನ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾ ಹಫೀಜ್ ಸಯ್ಯದ್ ಜತೆಯಾಗಿ ಮುಂಬೈ ದಾಳಿ ನಡೆಸಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com