ಅರ್ಹತೆ ಆಧಾರಿತ ವಲಸೆ ವ್ಯವಸ್ಥೆ: ಟ್ರಂಪ್ ಹೊಸ ನೀತಿಯಿಂದಾಗಿ ಭಾರತೀಯರಿಗೆ ರಿಲೀಫ್!

ಎಚ್ 1ಬಿ, ಎಚ್ ಬಿ 5 ವೀಸಾ ನೀತಿ ಬದಲಾವಣೆಯಿಂದಾಗಿ ಅಮೆರಿಕದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಅನಿವಾಸಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಎಚ್ 1ಬಿ, ಎಚ್ ಬಿ 5 ವೀಸಾ ನೀತಿ ಬದಲಾವಣೆಯಿಂದಾಗಿ ಅಮೆರಿಕದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಅನಿವಾಸಿ ಭಾರತೀಯರಿಗೆ ತಾತ್ಕಾಲಿಕ ರಿಲೀಫ್ ನೀಡುವ ಸಂಗತಿಯೊಂದನ್ನು ಅಮೆರಿಕ ಸರ್ಕಾರ ಬಹಿರಂಗ ಪಡಿಸಿದೆ.
ಮೂಲಗಳ ಪ್ರಕಾರ 'ಅರ್ಹತೆ ಆಧಾರಿತ ವಲಸೆ ವ್ಯವಸ್ಥೆ'ಯನ್ನು ಜಾರಿಗೊಳಿಸಲು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಮುಂದಾಗಿದ್ದು, ಇದರಿಂದಾಗಿ ಅಮೆರಿಕದಲ್ಲಿ ಉದ್ಯೋಗ ನಿರತರಾಗಿರುವ ಅನಿವಾಸಿ ಭಾರತೀಯರ ಪೈಕಿ ಅರ್ಹತೆ ಹೊಂದಿರುವವರಿಗೆ ಮಣೆ ಹಾಕಲಾಗುತ್ತದೆ ಎಂದು ಹೇಳಲಾಗಿದೆ.
ಉತ್ತಮ ಕೌಶಲ್ಯ ಹೊಂದಿರುವ ವಿದೇಶಿ ಪ್ರಜೆಗಳಿಗೆ ವೀಸಾ ನೀಡುವ 'ಅರ್ಹತೆ ಆಧಾರಿತ ವಲಸೆ ವ್ಯವಸ್ಥೆ'ಯನ್ನು ಜಾರಿಗೊಳಿಸುವ ಕುರಿತು ಅಮೆರಿಕ ಸರ್ಕಾರ ಚಿಂತನೆಯಲ್ಲಿ ತೊಡಗಿದೆ. 
ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಸರ್ಕಾರದ ವಲಸೆ ನೀತಿ ಕುರಿತು ವಿಶ್ವಾದ್ಯಂತ ಭಾರಿ ಚರ್ಚೆಗಳಾಗುತ್ತಿವೆ. ಉತ್ತಮ ಕೌಶಲ್ಯ ಹೊಂದಿರುವ ವಿದೇಶಿಗರಿಗೆ ಅವಕಾಶ ನೀಡುವ ಕುರಿತು ತಮ್ಮ ಸರ್ಕಾರ ಚಿಂತನೆಯಲ್ಲಿ ತೊಡಗಿದ್ದು, ವರ್ಷಗಳಿಂದ ಕಾಯುತ್ತಿರುವ ಕೌಶಲ್ಯ ಸಹಿತರಿಗೆ 'ಅರ್ಹತೆ ಆಧಾರಿತ ವಲಸೆ ವ್ಯವಸ್ಥೆ' ಜಾರಿ ಮಾಡುವ ಕುರಿತು ಚರ್ಚೆ ನಡೆಸುತ್ತಿದ್ದೇವೆ. ನಮಗೆ ಅಮೆರಿಕವನ್ನು ಮತ್ತೆ ಅತ್ಯುತ್ತಮವಾಗಿಸುವ ಜನ ಬೇಕಾಗಿದ್ದಾರೆ. ಹೀಗಾಗಿ ತಮ್ಮ ಹೊಸ ನೀತಿಯ ಕುರಿತು ಗಂಭೀರವಾಗಿ ಚರ್ಚೆ ನಡೆಸುತ್ತಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com