ಅಮೆರಿಕ ಉತ್ಪನ್ನಗಳ ಸುಂಕ ಹೆಚ್ಚಳ: ಭಾರತದ ವಿರುದ್ಧ ಟ್ರಂಪ್ ಕಿಡಿ

ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕ ಏರಿಕೆ ಮಾಡಿರುವ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಕಿಡಿ ಕಾರಿದ್ದು, ನಮ್ಮನ್ನು ಎಲ್ಲಾ ರಾಷ್ಟ್ರಗಳು ಬ್ಯಾಂಕ್‍ ಥರ ಉಪಯೋಗಿಸಿಕೊಂಡು ಲೂಟಿ ಮಡುತ್ತಿವೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕ ಏರಿಕೆ ಮಾಡಿರುವ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಕಿಡಿ ಕಾರಿದ್ದು, ನಮ್ಮನ್ನು ಎಲ್ಲಾ ರಾಷ್ಟ್ರಗಳು ಬ್ಯಾಂಕ್‍ ಥರ ಉಪಯೋಗಿಸಿಕೊಂಡು ಲೂಟಿ ಮಡುತ್ತಿವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಚರ್ಚೆಯೊಂದರಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಎಲ್ಲ ದೇಶಗಳೂ ಅಮೆರಿಕವನ್ನು ಬ್ಯಾಂಕ್ ರೀತಿ ಬಳಕೆ ಮಾಡಿಕೊಳ್ಳುತ್ತಿವೆ. ವ್ಯವಹಾರ ನೆಪದಲ್ಲಿ ನಮ್ಮಿಂದ ಹಣವನ್ನು ಲೂಟಿ ಮಾಡುತ್ತಿವೆ. ಕಳೆದ ವರ್ಷ ಚೀನಾದೊಂದಿಗಿನ ವ್ಯವಹಾರದಲ್ಲಿ ನಾವು 500 ಬಿಲಿಯನ್ ಡಾಲರ್ ಕಳೆದುಕೊಂಡೆವು. ಅಂತೆಯೇ ಯೂರೋಪಿಯನ್ ಒಕ್ಕೂಟದಿಂದ 150 ಬಿಲಿಯನ್ ಡಾಲರ್ ಹಣ ಹೋಯಿತು. ಇದಕ್ಕೆ ಕಾರಣ ಆ ದೇಶಗಳಲ್ಲಿನ ಆರ್ಥಿಕ ನೀತಿ ಮತ್ತು ಅನಗತ್ಯ ಸುಂಕ ಏರಿಕೆ ವಿಚಾರ ಎಂದು ಟ್ರಂಪ್  ಹೇಳಿದ್ದಾರೆ.
ಇದೇ ವೇಳೆ ಭಾರತದ ಕುರಿತು ಮಾತನಾಡಿದ ಟ್ರಂಪ್, ಅಮೆರಿಕದ ಕೆಲವೊಂದು ವಸ್ತುಗಳ ಮೇಲೆ ಭಾರತ ಶೇ. 100 ರಷ್ಟು ಸುಂಕ ವಿಧಿಸುತ್ತಿದೆ. ಭಾರತ ಸಹಿತ ಕೆಲವು ರಾಷ್ಟ್ರಗಳು ನಮ್ಮ ಉತ್ಪನ್ನಗಳಿಗೆ ಶೇ. 100 ರಷ್ಟು ತೆರಿಗೆ ವಿಧಿಸುತ್ತಿದೆ. ಅದನ್ನು ತೆರವುಗೊಳಿಸಬೇಕು ಎಂದು ಹೇಳಿದರು. ಅಲ್ಲದೇ ಯೂರೋಪಿಯನ್ ಒಕ್ಕೂಟ ದೇಶಗಳೊಂದಿಗೆ ವ್ಯಾಪಾರ ಅಸಮತೋಲನ ಇದೆ ಎನ್ನುವುದನ್ನು ನಿರಾಕರಿಸಿದ ಟ್ರಂಪ್, ನಾನು ಜಿ7 ಶೃಂಗ ಸಭೆಯಲ್ಲಿ ಸುಂಕ ಇಲ್ಲದೇ ವ್ಯಾಪಾರ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಆದರೆ ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಕೆಲವು ರಾಷ್ಟ್ರಗಳು ಸುಂಕ ಇಲ್ಲದೇ ವ್ಯಾಪಾರ ಮಾಡುತ್ತಿವೆ. ಕೆಲವು ರಾಷ್ಟ್ರಗಳು ಅದರ ಬಗ್ಗೆ ಮಾತೇ ಆಡುತ್ತಿಲ್ಲ. ನಾವು ಇದರ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ಭಾರತ ಹಾಗೂ ಅಮೆರಿಕ ನಡುವೆ ದ್ವಿಪಕ್ಷೀಯ ಮಾತುಕತೆಗೆ ಕೆಲವೇ ದಿನಗಳು ಬಾಕಿ ಇದ್ದು, ಈ ಹೊತ್ತಿನಲ್ಲಿ ಅಮೆರಿಕ ಅಧ್ಯಕ್ಷರ ಹೇಳಿಕೆ ದ್ವಿಪಕ್ಷೀಯ ಮಾತುಕತೆ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮುಂದಿನವಾರ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಮೆರಿಕ ಪ್ರವಾಸ ಕೈಗೊಳ್ಳಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com