2018ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ 7.4ಕ್ಕೆ ಏರಿಕೆ: ಐಎಂಎಫ್

ನೋಟು ನಿಷೇಧ ಮತ್ತು ಜಿಎಸ್ ಟಿ ತೆರಿಗೆ ಬಳಿಕ ಹಿನ್ನಡೆ ಅನುಭವಿಸಿದ್ದ ಭಾರತದ ಆರ್ಥಿಕ ಪ್ರಗತಿಯ ದರ ಏರಿಕೆಯಾಗಿದ್ದು, 2018ರಲ್ಲಿ ಭಾರತ 7.4ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ವಾಷಿಂಗ್ಟನ್‌: ನೋಟು ನಿಷೇಧ ಮತ್ತು ಜಿಎಸ್ ಟಿ ತೆರಿಗೆ ಬಳಿಕ ಹಿನ್ನಡೆ ಅನುಭವಿಸಿದ್ದ ಭಾರತದ ಆರ್ಥಿಕ ಪ್ರಗತಿಯ ದರ ಏರಿಕೆಯಾಗಿದ್ದು, 2018ರಲ್ಲಿ ಭಾರತ 7.4ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ಬುಧವಾರ ಬಿಡುಗಡೆಯಾಗಿರುವ ಐಎಂಎಫ್ ನ ಏಷ್ಯಾ ಮತ್ತು ಪೆಸಿಫಿಕ್ ಪ್ರಾದೇಶಿಕ ಆರ್ಥಿಕ ಹೊರನೋಟ ವರದಿಯನ್ವಯ ಭಾರತದ ಮಧ್ಯಮ-ಅವಧಿಯ ಆರ್ಥಿಕ ವರದಿ ಸಕಾರಾತ್ಮಕವಾಗಿದ್ದು, ಇದೇ ಆರ್ಥಿಕ ಪ್ರಗತಿಯನ್ನು ಮುಂದುವರೆಸಿದರೆ 2019ರ ವೇಳೆಗೆ ಭಾರತ 7.8ರಷ್ಟು ಆರ್ಥಿಕ ಪ್ರಗತಿವೇಗ ಮುಟ್ಟಲಿದೆ ಎಂದು ಹೇಳಲಾಗಿದೆ. ಈ ಹಿಂದೆ ಇದೇ ಐಎಂಎಫ್ ಭಾರತ ಸರ್ಕಾರದ ನೋಟು ನಿಷೇಧ ಜಾರಿ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದಾಗಿ ಭಾರತದ ಆರ್ಥಿಕ ಪ್ರಗತಿ ದರ ಕುಂಠಿತವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ಇದೀಗ ಭಾರತ ನೋಟು ನಿಷೇಥ ಮತ್ತು ಜಿಎಸ್ ಟಿ ಆರ್ಥಿಕ ಹೊಡೆತದಿಂದ ಶೀಘ್ರ ಚೇತರಿಕೆ ಕಂಡಿದ್ದು, ಭಾರತದ ಆರ್ಥಿಕ ಪ್ರಗತಿ ದರ 7.4ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ. ಅಂತೆಯೇ ಭಾರತದಲ್ಲಿ ಹಣದುಬ್ಬರದ ಕುರಿತು ಎಚ್ಚರಿಕೆ ಕೂಡ ನೀಡಿರುವ ಐಎಂಎಫ್, ಭಾರತ ತನ್ನ ಆರ್ಥಿಕ ನೀತಿಗಳ ಕಠಿಣತೆಯನ್ನು ಮುಂದುವರೆಸಬೇಕು. 2017ರಲ್ಲಿ ಗ್ರಾಹಕ ಬೆಲೆ ಹಣದುಬ್ಬರ 3.6ರಷ್ಟಿದ್ದು, 2018-2019ರ ವೇಳೆ 5ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. 
ಭಾರತದಲ್ಲಿ ಜಾರಿಗೆ ತರಲಾಗಿರುವ ಆರ್ಥಿಕ ಸುಧಾರಣಾ ಕ್ರಮಗಳು ಫಲ ನೀಡುತ್ತಿದ್ದು, ಜನರಿಗೆ ಪ್ರಯೋಜನಕಾರಿಯಾಗಿವೆ. ಸುಸ್ಥಿರ ಆರ್ಥಿಕ ಅಭಿವೃದ್ಧಿ ಸಾಧಿಸಲು ಭಾರತ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ. ಆರ್ಥಿಕ ಸೇರ್ಪಡೆ ವಿಷಯದಲ್ಲಿ ಪ್ರಗತಿ ಸಾಧಿಸಲು ಮತ್ತು ಭಾರತವನ್ನು ಆರ್ಥಿಕ ಶಕ್ತಿಯನ್ನಾಗಿ ಬೆಳೆಸಲು ತಂತ್ರಜ್ಞಾನದ ವ್ಯಾಪಕ ಬಳಕೆ ಮತ್ತು ಇತರ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಆದ್ಯತೆ ನೀಡಬೇಕಾಗಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. 
ಇನ್ನು ಭಾರತದ ಬಳಿಕ ಏಷ್ಯಾ ಫೆಸಿಫಿಕ್ ಭಾಗದಲ್ಲಿ ಬಾಂಗ್ಲಾದೇಶ ಆರ್ಥಿಕ ಪ್ರಗತಿ ದರ ಏರುಗತಿಯಲ್ಲಿ ಸಾಗಿದ್ದು, 2018-2019ಲ್ಲಿ ಶೇ.7ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ಇನ್ನು ಶ್ರೀಲಂಕಾ 2018ರಲ್ಲಿ 4 ಮತ್ತು 2019ರಲ್ಲಿ 4.5ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ಇನ್ನು ವರದಿಯಲ್ಲಿ ಪಾಕಿಸ್ತಾನ ಆರ್ಥಿಕ ಪ್ರಗತಿ ಕುರಿತು ಪ್ರಸ್ತಾಪವಾಗಿಲ್ಲ. ಆದರೆ ಭಾರತದ ಪ್ರತಿಸ್ಪರ್ಧಿ ಎಂದು ಹೇಳಲಾಗುತ್ತಿರುವ ಚೀನಾ 2018ರಲ್ಲಿ 6.6ರಷ್ಟು ಮತ್ತು 2019ರಲ್ಲಿ 6.4 ಆರ್ಥಿಕ ಪ್ರಗತಿ ಸಾಧಿಸುವ ನಿರೀಕ್ಷೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com