ಭಾರತೀಯ ರಾಯಭಾರಿ ನವತೇಜ್ ಸಿಂಗ್ ಸರ್ನಾ
ಭಾರತೀಯ ರಾಯಭಾರಿ ನವತೇಜ್ ಸಿಂಗ್ ಸರ್ನಾ

ಭಾರತ ಕುರಿತು 'ನಕಾರಾತ್ಮಕ' ಚಿತ್ರಣ: ಅಮೆರಿಕ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಭಾರತೀಯ ರಾಯಭಾರಿ

ಭಾರತದ ಕುರಿತು ನಕಾರಾತ್ಮಕ ಚಿತ್ರಣ ನೀಡುತ್ತಿದ್ದ ಅಮೆರಿಕದಲ್ಲಿನ ಮಾಧ್ಯಮಗಳನ್ನು ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ನವತೇಜ್ ಸಿಂಗ್ ಸರ್ನಾ ಅವರು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ...
Published on
ವಾಷಿಂಗ್ಟನ್; ಭಾರತದ ಕುರಿತು ನಕಾರಾತ್ಮಕ ಚಿತ್ರಣ ನೀಡುತ್ತಿದ್ದ ಅಮೆರಿಕದಲ್ಲಿನ ಮಾಧ್ಯಮಗಳನ್ನು ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ನವತೇಜ್ ಸಿಂಗ್ ಸರ್ನಾ ಅವರು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 
ಅಮೆರಿಕ ಥಿಂಕ್ ಟ್ಯಾಂಕ್ ಸೆಂಟರ್ ಆಯೋಜಿಸಿದ್ದ ಅಂತರಾಷ್ಟ್ರೀಯ ಅಧ್ಯಯನ ಮತ್ತು ಯುದ್ಧ ತಂತ್ರಗಳ ಕುರಿತ ವಿಚಾರಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ವಿದೇಶೀ ಮಾಧ್ಯಗಳಲ್ಲಿ ವಿನಾಯಿತಿ ನೀಡುವ ಸುದ್ದಿಗಳನ್ನು ತೆಗೆದುಕೊಂಡು, ಅಭಿವೃದ್ಧಿ ಕುರಿತ ಸುದ್ದಿಗಳನ್ನು ನಿರ್ಲಕ್ಷ್ಯ ತೋರುವ ಕೆಲ ಪ್ರವೃತ್ತಿಗಳಿವೆ. ಇದು ಚಿಂತೆ ಹಾಗೂ ಕರುಣೆಯ ನಿದರ್ಶನವೆಂದೇ ಹೇಳಬಹುದು, ಭಾರತ ಮುಂದಕ್ಕೆ ಸಾಗುತ್ತಿದ್ದು, ವಿದೇಶಿ ಮಾಧ್ಯಮಗಳು ಮಾತ್ರ ಮುಂದಕ್ಕೆ ಸಾಗುತ್ತಿಲ್ಲ ಎಂದು ಹೇಳಿದ್ದಾರೆ. 
ಅಮೆರಿಕಾದ ಮಾಧ್ಯಮಗಳು ವಿನಾಯಿತಿ ಸುದ್ದಿಗಳ ಹೆಚ್ಚು ಮೌಲ್ಯ ನೀಡಿ, ಅಭಿವೃದ್ಧಿ ಕುರಿತ ಸುದ್ದಿಗಳಿಗೆ ನಿರ್ಲಕ್ಷ್ಯ ತೋರುತ್ತಿದೆ. ವರದಕ್ಷಿಣೆ ಪ್ರಕರಣಗಳು, ಜಾತಿ ವಿಚಾರದಂತಹ ಹಲವು ಸಾಮಾಜಿಕ ವಿಚಾರಗಳಿವೆ. ಈ ರೀತಿಯ ಪ್ರಕರಣ ಎಲ್ಲೆಡೆ ನಡೆಯುತ್ತಲೇ ಇರುತ್ತದೆ. ಈ ರೀತಿಯ ಘಟನೆಗಳು ಬೇಸರವನ್ನು ತರಿಸುತ್ತದೆ. ಆದರೆ, ಇದರಿಂದ ನನ್ನ ನಿದ್ರಗೆ ಭಂಗವಾಗುವುದಿಲ್ಲ. ಭಾರತದ ಕುರಿತು ನಕಾರಾತ್ಮಕ ಸುದ್ದಿ ಪ್ರಕಟಿಸುವುದಿಂದ ಅಮೆರಿಕ ಮಾಧ್ಯಮಗಳು ಸಾರ್ವಜನಿಕರಿಗೆ ಅನ್ಯಾಯ ಮಾಡಿದಂತೆ. 

ನಕಾರಾತ್ಮಕ ಚಿತ್ರಣಗಳು ಒಂದು ರೀತಿಯ ವಿಚಿತ್ರ ಲಕ್ಷಣಗಳನ್ನು ತೋರ್ಪಡಿಸುತ್ತದೆ. ಇದು ಪತ್ರಕರ್ತರ ಕೀಳುಮಟ್ಟತನವನ್ನು ತೋರಿಸುತ್ತದೆ. ಅಮೆರಿಕಾ ಮಾಧ್ಯಮಗಳು ಮುಂದುವರೆಯಬೇಕೆಂದರೆ, ಮುಂದಕ್ಕೆ ಸಾಗಬೇಕು. ಇದನ್ನು ನಾನು ಭಾರತೀಯನೆಂದು ಹೇಳುತ್ತಿಲ್ಲ. ಅಮೆರಿಕಾದ ಪ್ರಜೆಯಾಗಿದ್ದರೂ, ಸರಿಯಾದ ಮಾಹಿತಿ ಪಡೆಯಲು ನಾನು ಬಯಸುತ್ತಿದ್ದೆ ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com