ಅಕೋಸ್ಟ ಅಸಭ್ಯವಾಗಿ ವರ್ತಿಸಿದರೆ ಸುದ್ದಿಗೋಷ್ಠಿಯಿಂದ ಹೊರಕ್ಕೆ- ಡೊನಾಲ್ಡ್ ಟ್ರಂಪ್

ಸಿಎನ್ ಎನ್ ವರದಿಗಾರ ಜಿಮ್ ಅಕೋಸ್ಟ ಅಸಭ್ಯವಾಗಿ ವರ್ತಿಸಿದರೆ ಸುದ್ದಿಗೋಷ್ಠಿಯಿಂದ ಹೊರಕ್ಕೆ ದಬ್ಬಲಾಗುವುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಅಕೋಸ್ಟ , ಡೊನಾಲ್ಡ್ ಟ್ರಂಪ್,
ಅಕೋಸ್ಟ , ಡೊನಾಲ್ಡ್ ಟ್ರಂಪ್,

ವಾಷಿಂಗ್ಟನ್ : ಸಿಎನ್ ಎನ್  ವರದಿಗಾರ ಜಿಮ್  ಅಕೋಸ್ಟ ಅಸಭ್ಯವಾಗಿ  ವರ್ತಿಸಿದರೆ ಸುದ್ದಿಗೋಷ್ಠಿಯಿಂದ ಹೊರಕ್ಕೆ ದಬ್ಬಲಾಗುವುದು  ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಎಚ್ಚರಿಕೆ ನೀಡಿದ್ದಾರೆ.

ಸಿಎನ್ಎನ್ ವರದಿಗಾರ ಜಿಮ್ ಅಕೋಸ್ಟ ಅವರ ಪತ್ರಿಕಾ ಸ್ಥಾನಮಾನವನ್ನು ಮತ್ತೆ ನೀಡುವಂತೆ ಶ್ವೇತ ಭವನಕ್ಕೆ ಆದೇಶ ನೀಡಿದ ಯುನೈಟೆಡ್ ಸ್ಟೇಟ್ಸ್  ನ್ಯಾಯಾಲಯದ ತೀರ್ಪು ಕುರಿತು ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್,  ಇದು ಉತ್ತಮವೇ ಆಯಿತು. ಇದು ದೊಡ್ಡ  ವ್ಯವಹಾರವಲ್ಲ ಎಂದಿದ್ದಾರೆ.

ನಡವಳಿಕೆಗಾಗಿ ನೀತಿ, ನಿಯಮಗಳನ್ನು ರೂಪಿಸಲಾಗುತ್ತದೆ. ಅದನ್ನು ನಾವು ಮಾಡುತ್ತಿದ್ದೇವೆ. ಇದು ದೊಡ್ಡ ವ್ಯವಹಾರವಲ್ಲ, ಜಿಮ್ ಅಕೋಸ್ಟಾ ಅಸಭ್ಯವಾಗಿ ವರ್ತಿಸಿದರೆ ಸುದ್ದಿಗೋಷ್ಠಿಯಿಂದಲೇ ಹೊರಕ್ಕೆ ದಬ್ಬಲಾಗುವುದು ಎಂದು ಹೇಳಿದರು.

ಶ್ವೇತಭವನದಲ್ಲಿ ಸಿಎನ್ ಎನ್ ಮುಖ್ಯಸ್ಥರಾಗಿರುವ ಅಕೋಸ್ಟಾ ವರ್ತನೆ  ಬಗ್ಗೆ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಶ್ವೇತ ಭವನದಲ್ಲಿ ನೂರಾರು ವರದಿಗಾರರಿದ್ದಾರೆ. ಆದರೆ. ಅವರಾರು ಕೂಡಾ ಪ್ರಶ್ನೆ ಕೇಳಲ್ಲ. ಕಾರಣ ಅಕೋಸ್ಟಾ  ಎದ್ದುನಿಂತು ಕಿರುಚಾಡುತಾ ಪ್ರಶ್ನೆ ಕೇಳುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.

ಬೆಂಬಲ ನೀಡಿದ ಸಹೋದ್ಯೋಗಿಗಳು ಹಾಗೂ   ಯುನೈಟೆಡ್ ಸ್ಟೇಟ್ಸ್  ನ್ಯಾಯಾಲಯದ ನ್ಯಾಯಾಧೀಶರಿಗೆ ಅಕೋಸ್ಟಾ ಧನ್ಯವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com