ತೆರಿಗೆ ರಿಯಾಯಿತಿಗೆ ಮಾತ್ರ ಭಾರತ ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಹೊಂದಿದೆ: ಡೊನಾಲ್ಡ್ ಟ್ರಂಪ್

ಭಾರತ ಕೇವಲ ತೆರಿಗೆ ವಿನಾಯಿತಿಗಾಗಿ ಮಾತ್ರ ಅಮೆರಿಕದೊಂದಿಗೆ ವಾಣಿಜ್ಯಾತ್ಮಕ ಸಂಬಂಧ ಹೊಂದಿದೆ ಎಂದು ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಭಾರತ ಕೇವಲ ತೆರಿಗೆ ವಿನಾಯಿತಿಗಾಗಿ ಮಾತ್ರ ಅಮೆರಿಕದೊಂದಿಗೆ ವಾಣಿಜ್ಯಾತ್ಮಕ ಸಂಬಂಧ ಹೊಂದಿದೆ ಎಂದು ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡೊನಾಲ್ಟ್ ಟ್ರಂಪ್, ಭಾರತ ದೇಶದಲ್ಲಿ ಅಮೆರಿಕ ವಸ್ತುಗಳಿಗೆ ಶೇ.100 ರಷ್ಟು ತೆರಿಗೆ ಹೇರಲಾಗುತ್ತಿದೆ. ಆದರೆ ಅಮೆರಿಕದಲ್ಲಿ ಭಾರತೀಯ ವಸ್ತುಗಳಿಗೆ ಯಾವುದೇ ರೀತಿಯ ತೆರಿಗೆ ಇಲ್ಲ. ಭಾರತೀಯ ಕಂಪನಿಗಳು ಇಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ ಅನುಭವಿಸುತ್ತಿವೆ. ಇದೇ ಕಾರಣಕ್ಕೆ ಭಾರತ ತನ್ನೊಂದಿಗೆ ವಾಣಿಜ್ಯ ಸಂಬಂಧ ಹೊಂದಿದೆ. ನಾನು ಭಾರತೀಯ ವಸ್ತುಗಳ ಮೇಲೆ ತೆರಿಗೆ ಹೇರಬಾರದು ಎಂಬ ಒಂದೇ ಕಾರಣಕ್ಕೆ ಭಾರತ ತನ್ನೊಂದಿಗೆ ವಾಣಿಜ್ಯಾತ್ಮಕ ಸಂಬಂಧ ಹೊಂದಿದೆ ಎಂದು ಹೇಳಿದ್ದಾರೆ.

ಅಂತೆಯೇ, ಭಾರತವನ್ನು ನಾನು ಇಲ್ಲಿ ಟಾರ್ಗೆಟ್ ಮಾಡುತ್ತಿಲ್ಲ. ಇಲ್ಲಿ ಭಾರತ ಕೇವಲ ಉದಾಹರಣೆಯಷ್ಟೇ.. ಭಾರತದಂತಹ ನೂರಾರು ರಾಷ್ಟ್ರಗಳು ಕೇವಲ ತೆರಿಗೆ ವಿನಾಯಿತಿಗಾಗಿ ಮಾತ್ರ ಅಮೆರಿಕದೊಂದಿಗೆ ಸಂಬಂಧ ಹೊಂದಿವೆ. ನಮ್ಮ ಈ ಹಿಂದಿನ ಮೂರ್ಖತನದ ಫಲವಾಗಿ ನಾವು ಇಂದು ಸಾವಿರಾರು ಕೋಟಿ ತೆರಿಗೆ ನಷ್ಟ ಅನುಭವಿಸುತ್ತಿದ್ದೇವೆ. ಇದನ್ನು ತಡೆಯುವುದೇ ನನ್ನ ಉದ್ದೇಶ ಎಂದು ಟ್ರಂಪ್ ಹೇಳಿದ್ದಾರೆ.
ಭಾರತಕ್ಕಿಂತ ಇನ್ನೂ ಕೆಲವು ರಾಷ್ಟ್ರಗಳಿವೆ. ಅವುಗಳ ಹೆಸರುಗಳನ್ನು ನಾನು ಇಲ್ಲಿ ಉಲ್ಲೇಖ ಮಾಡಲು ಬಯಸುವುದಿಲ್ಲ. ಇದು ಇನ್ನೂ ಗಂಭೀರವಾಗಿದ್ದು, ಆ ರಾಷ್ಟ್ರಗಳು ಅಮೆರಿಕಕ್ಕೆ ಮಾಡುತ್ತಿರುವ ಅನ್ಯಾಯ ದೊಡ್ಡ ಪ್ರಮಾಣದಲ್ಲಿದೆ. ಹೀಗಾಗಿ ಇಂತಹ ರಾಷ್ಟ್ರಗಳೊಂದಿಗೆ ನಾವು ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಂಧಾನಕ್ಕೆ ಒಪ್ಪುವುದಿಲ್ಲ. ಅವರು ಅಮೆರಿಕದಲ್ಲಿ ತಮ್ಮ ಮನಸ್ಸಿಗೆ ಬಂದ ಹಾಗೆ ಮಾಡಲು ನಾವು ಬಿಡುವುದಿಲ್ಲ. ಇದೇ ಕಾರಣಕ್ಕೆ ಅಮೆರಿಕ ವಾಣಿಜ್ಯ ನೀತಿ-ನಿಯಮಾವಳಿಗೆ ಬದಲಾವಣೆ ತಂದಿದ್ದೇವೆ ಎಂದು ಟ್ರಂಪ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com