ಸಾಂದರ್ಭಿಕ ಚಿತ್ರ
ವಿದೇಶ
ಅಫ್ಘಾನಿಸ್ತಾನ : ಆತ್ಮಹತ್ಯಾ ಬಾಂಬರ್ ದಾಳಿ : 13 ಸಾವು , 30 ಮಂದಿಗೆ ಗಾಯ
ಅಫ್ಘಾನಿಸ್ತಾನದ ನಾಂಗರ್ ಹರ್ ನಲ್ಲಿ ಆತ್ಮಹತ್ಯಾ ಬಾಂಬರ್ ಗಳು ದಾಳಿ ನಡೆಸಿದ್ದರಿಂದ 13 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸಾರ್ವಜನಿಕ ಆರೋಗ್ಯ ನಿರ್ದೇಶಕ ನಜಿಬುಲ್ಲಾ ಕಮಾವಾಲಾ ತಿಳಿಸಿದ್ದಾರೆ.
ನಾಂಗರ್ ಹರ್ : ಅಫ್ಘಾನಿಸ್ತಾನದ ನಾಂಗರ್ ಹರ್ ನಲ್ಲಿ ಆತ್ಮಹತ್ಯಾ ಬಾಂಬರ್ ಗಳು ದಾಳಿ ನಡೆಸಿದ್ದರಿಂದ 13 ಮಂದಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸಾರ್ವಜನಿಕ ಆರೋಗ್ಯ ನಿರ್ದೇಶಕ ನಜಿಬುಲ್ಲಾ ಕಮಾವಾಲಾ ತಿಳಿಸಿದ್ದಾರೆ.
ಕಾಮಾ ಜಿಲ್ಲೆಯಲ್ಲಿ ಸಂಸತ್ ಚುನಾವಣೆಗೆ ಸ್ಪರ್ಧಿಸಿರುವ ನಾಸಿರ್ ಅಹ್ಮದ್ ಎಂಬ ಅಭ್ಯರ್ಥಿ ತನ್ನ ಚಿಂತನೆಗಳನ್ನು ಜನತೆಯೊಂದಿಗೆ ಹಂಚಿಕೊಳ್ಳಲು ಸಲುವಾಗಿ ಆಯೋಜಿಸಿದ್ದ ಚುನಾವಣಾ ಸಭೆ ಗುರಿಯಾಗಿಟ್ಟುಕೊಂಡು ಆತ್ಮಹತ್ಯಾ ಬಾಂಬರ್ ಗಳು ದಾಳಿ ನಡೆಸಿದ್ದಾರೆ ಎಂದು ಪ್ರಾಂತೀಯ ಗೌರ್ನರ್ ವಕ್ತಾರ ಅತ್ತವುಲ್ಲಾ ಕೊಗ್ಯಾನಿ ಹೇಳಿದ್ದಾರೆ.
ಹಿರಿಯ ನಾಯಕರು ಚುನಾವಣಾ ಭಾಷಣ ಮಾಡುತ್ತಿದ್ದಾಗ ಹಠಾತ್ತನೆ ಬಾಂಬ್ ಸ್ಪೋಟಗೊಂಡಿದ್ದರಿಂದ ಪ್ರಜ್ಞೆ ಕಳೆದುಕೊಂಡಿದ್ದ ತಾನು ಕಣ್ಣು ಬಿಟ್ಟಿ ನೋಡಿದಾಗ ಸುತ್ತಲೂ ರಕ್ತಸಿಕ್ತ ಮೃತದೇಹಗಳು ಬಿದಿದ್ದವು ಎಂದು ಪ್ರತ್ಯಕ್ಷದರ್ಶಿ ಸಯ್ಯದ್ ಹುಮಾಯೂನ್ ತಿಳಿಸಿದ್ದಾರೆ.
ಅಕ್ಟೋಬರ್ 20 ರಂದು ಸಂಸತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಸುಮಾರು 2500 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷ ಚುನಾವಣೆಗೆ ಇದೇ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ.

