ಆಕಿಯೊ ಭಾವಿ ಪತಿ ಕೇಯ್ ಮೊರಿಯೊ ಹಡಗಿನಲ್ಲಿ ಕೆಲಸ ಮಾಡುವ ನೌಕರ. ರೆಸ್ಟಾರೆಂಟ್‌ನಲ್ಲಿ ಊಟ ಮಾಡುವಾಗ ಕೇಯ್ ಪ್ರೇಮ ನಿವೇದನೆ ಮಾಡಿದ್ದರು. ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ ಅವರನ್ನೇ ಮದುವೆಯಾಗಲು ಒಪ್ಪಿಕೊಂಡಿದ್ದ ಅಯಾಕೊ ಟೋಕಿಯೋದಲ್ಲಿರುವ ಮೇಜಿ ಜಿಂಗು ಮಂದಿರದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗುತ್ತಿದ್ದಾರೆ. ಜಪಾನ್‌ನಲ್ಲಿ ರಾಜಮನೆತನದವರು ಇತರ ಸಾಮಾಜದವರನ್ನು ಮದುವೆಯಾ ಗುತ್ತಿರುವುದು ಹೆಚ್ಚಾಗಿರುವ ಕಾರಣ ಈಗ ಜಪಾನ್‌ನಲ್ಲಿ ಕೇವಲ 18 ರಾಜ ಮನೆತನಗಳು ಮಾತ್ರ ಉಳಿದಿವೆ.