ಶ್ರೀಲಂಕಾ ಬಾಂಬ್ ಸ್ಫೋಟ: ಕೂದಲೆಳೆ ಅಂತರದಲ್ಲಿ ಪಾರಾದ ನಟಿ ಸಂಜನಾ ಸಹೋದರ ಬಿಚ್ಚಿಟ್ಟ ಕರಾಳತೆ!

ಈಸ್ಟರ್ ಹಬ್ಬದ ದಿನವೇ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ದುರಂತದಲ್ಲಿ ಕನ್ನಡಗನೊಬ್ಬ ಕೂದಲೆ ಅಂತರದಲ್ಲಿ ಪಾರಾಗಿದ್ದು ರಸ್ತೆಯಲ್ಲಿ ರಕ್ದ ಕೋಡಿ ನೋಡಿ ಗಾಬರಿಯಾಗುತ್ತಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕೊಲಂಬೊ: ಈಸ್ಟರ್ ಹಬ್ಬದ ದಿನವೇ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ದುರಂತದಲ್ಲಿ ಕನ್ನಡಗನೊಬ್ಬ ಕೂದಲೆ ಅಂತರದಲ್ಲಿ ಪಾರಾಗಿದ್ದು ರಸ್ತೆಯಲ್ಲಿ ರಕ್ದ ಕೋಡಿ ನೋಡಿ ಗಾಬರಿಯಾಗುತ್ತಿದೆ ಎಂದು ಹೇಳಿದ್ದಾರೆ.
ನಟಿ ಸಂಜನಾ ಅವರ ಸಹೋದರ ರಾಹುಲ್ ಸ್ಫೋಟ ಸಂಭವಿಸಿದ ಕಿಂಗ್ಸ್‍ಬ್ಯುರಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಬಾಂಬ್ ಸ್ಫೋಟವಾದ ಕೂಡಲೇ ಹೋಟೆಲ್ ನಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. 
ನಾನು ಹೋಟೆಲ್ ನಲ್ಲಿ ಮಲಗಿದ್ದಾಗ ಸ್ಫೋಟದ ಶಬ್ದ ಕೇಳಿಸಿತು. ಸ್ಫೋಟದ ವೇಳೆ ಹಲವುರು ಸಾವನ್ನಪ್ಪಿದ್ದರು. ಘಟನಾ ಸ್ಥಳದಲ್ಲಿ ರಕ್ತದೋಕುಳಿ ನೋಡಿ ಶಾಕ್ ಆಯಿತು. ಆರೇಳು ವರ್ಷಗಳಿಂದ ನಾನು ಕೊಲಂಬೋಗೆ ಬರುತ್ತಿದ್ದೆ. ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ ಎಂದು ಹೇಳಿದರು. 
ಶ್ರೀಲಂಕಾದಲ್ಲಿ ನಡೆದ ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸೇರಿ ಮೂವರು ಭಾರತೀಯರು ಮೃತಪಟ್ಟಿದ್ದಾರೆ. ಒಟ್ಟಾರೆ ಬಾಂಬ್ ಸ್ಫೋಟದಲ್ಲಿ 207 ಮಂದಿ ಸಾವನ್ನಪ್ಪಿದ್ದು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com