ಕಾಶ್ಮೀರ ವಿಚಾರ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಗೌಪ್ಯ ಸಭೆ, ಶಿಷ್ಟಾಚಾರದ ಬದಲು ಅನೌಪಚಾರಿಕ ಸಭೆ

ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಕಾಶ್ಮೀರದ ವಿಧಿ 370 ರದ್ಧತಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಗೌಪ್ಯ ಚರ್ಚೆ ನಡೆಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಾಲ್ಕು ಗೋಡೆಗಳ ನಡುವೆ ಸದಸ್ಯರಿಂದ ರಹಸ್ಯಸಭೆ, ವಿಶ್ವಸಂಸ್ಥೆಯ ಅಧ್ಯಕ್ಷತೆ ಹೊಂದಿರುವ ಪೋಲೆಂಡ್ ತಟಸ್ಥ

ವಿಶ್ವಸಂಸ್ಥೆ: ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಕಾಶ್ಮೀರದ ವಿಧಿ 370 ರದ್ಧತಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಗೌಪ್ಯ ಚರ್ಚೆ ನಡೆಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನದ ಸಂವಿಧಾನದ ವಿಧಿಯನ್ನು ಕೈಬಿಡುವ ಭಾರತದ ನಿರ್ಧಾರದ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶುಕ್ರವಾರ ಗೌಪ್ಯ ಸಭೆ ನಡೆಸಿತು. ಶಿಷ್ಟಾಚಾರದಂತೆ ಕುದುರೆ ಲಾಳದ ಆಕಾರದ ಮೇಜಿನಲ್ಲಿ (ಹಾರ್ಸ್​ ಶೂ ಟೇಬಲ್​) ಈ ಸಭೆ ನಡೆಯದೆ ಭದ್ರತಾ ಮಂಡಳಿಯ ಸಮಾಲೋಚನಾ ಕೊಠಡಿಯಲ್ಲಿ ಅನೌಪಚಾರಿಕವಾಗಿ ಈ ಸಭೆ ನಡೆದಿದೆ. 

ಇದು ಮತ್ತೆ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಹಿನ್ನಡೆಯನ್ನುಂಟು ಮಾಡಿದ್ದು, ಕುದುರೆ ಲಾಳದ ಆಕಾರದ ಮೇಜಿನಲ್ಲಿ ನಡೆದ ಸಭೆ ಮತ್ತು ಅದರ ನಿರ್ಣಯಗಳಿಗೆ ಮಾತ್ರ ಮಾನ್ಯತೆ ಎಂದು ಹೇಳಲಾಗಿದೆ. ಇನ್ನು ಈ ಸಭೆಯಲ್ಲಿನ ಸಮಾಲೋಚನೆಗಳು ಅನೌಪಚಾರಿಕವಾಗಿರುವುದರಿಂದ ಯುಎನ್‌ಎಸ್‌ಸಿ ಸಭೆಯ ಫಲಿತಾಂಶವು ಔಪಚಾರಿಕ ಘೋಷಣೆಯಾಗುವುದಿಲ್ಲ ಎನ್ನಲಾಗಿದೆ. 

ಐದು ಖಾಯಂ ಸದಸ್ಯರು ಮತ್ತು 10 ಖಾಯಂ ಸದಸ್ಯರಿಗೆ ಮಾತ್ರ ಮುಕ್ತವಾಗಿರುವ ಈ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಭಾಗವಹಿಸುತ್ತಿಲ್ಲ ಎನ್ನಲಾಗಿದೆ. ಯುಎನ್‌ಎಸ್‌ಸಿಯ ಖಾಯಂ ಸದಸ್ಯ ಮತ್ತು ಪಾಕಿಸ್ತಾನದ ಆಪ್ತ ಮಿತ್ರನಾಗಿದ್ದ ಚೀನಾ, ಕೌನ್ಸಿಲ್‌ ನಲ್ಲಿ ಕ್ಲೋಸ್ಡ್ ಡೋರ್ ಸಭೆ ನಡೆಸಲು ಕೇಳಿಕೊಂಡಿತ್ತು, ಇದು ತನ್ನ ಚರ್ಚೆಯನ್ನು ಬೆಳಿಗ್ಗೆ 10 ಗಂಟೆಗೆ (ಸಂಜೆ 7:30 ಕ್ಕೆ ಭಾರತೀಯ ಕಾಲಮಾನ) ಭದ್ರತಾ ಮಂಡಳಿ ಸಮಾಲೋಚನಾ ಕೊಠಡಿಯಲ್ಲಿ ಪ್ರಾರಂಭಿಸಿತು.

ಆಗಸ್ಟ್ 5 ರಂದು ಭಾರತವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com