ಕಾಶ್ಮೀರ ಮತ್ತು ವಿಧಿ 370ರ ರದ್ಧತಿ ಭಾರತದ ಆಂತರಿಕ ವಿಚಾರ: ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಭಾರತ ತಿರುಗೇಟು

ಕಾಶ್ಮೀರ ಮತ್ತು ವಿಧಿ 370ರ ರದ್ಧತಿ ವಿಚಾರ ಸಂಪೂರ್ಣ ಭಾರತದ ಆಂತರಿಕ ವಿಚಾರವಾಗಿದ್ದು, ಇದರಲ್ಲೇ ಮೂರನೇಯವರ ಮಧ್ಯ ಪ್ರವೇಶ ಬೇಕಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಿರ್ಬಂಧ ತೆರವಿಗೆ ಭಾರತ ಬದ್ಧ, ಆದರೆ ಪರಿಸ್ಥಿತಿ ಸುಧಾರಿಸಿದ ಬಳಿಕವಷ್ಟೇ

ಭವಿಷ್ಯದಲ್ಲಿ ಇನ್ನೆಂದೂ ಕಾಶ್ಮೀರದಲ್ಲಿ ರಕ್ತಪಾತಕ್ಕೆ ಅವಕಾಶ ನೀಡಬಾರದು ಎಂಬುದು ಭಾರತದ ಆಶಯ​

ನ್ಯೂಯಾರ್ಕ್: ಕಾಶ್ಮೀರ ಮತ್ತು ವಿಧಿ 370ರ ರದ್ಧತಿ ವಿಚಾರ ಸಂಪೂರ್ಣ ಭಾರತದ ಆಂತರಿಕ ವಿಚಾರವಾಗಿದ್ದು, ಇದರಲ್ಲೇ ಮೂರನೇಯವರ ಮಧ್ಯ ಪ್ರವೇಶ ಬೇಕಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.

ವಿಶ್ವಸಂಸ್ಥೆಯಲ್ಲಿ ಇಂದು ಕಾಶ್ಮೀರ ವಿಚಾರವಾಗಿ ನಡೆದ ಗೌಪ್ಯ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್, ಕಾಶ್ಮೀರ ಮತ್ತು ವಿಧಿ 370ರ ರದ್ಧತಿ ವಿಚಾರ ಸಂಪೂರ್ಣ ಭಾರತದ ಆಂತರಿಕ ವಿಚಾರವಾಗಿದ್ದು, ಇದರಲ್ಲೇ ಮೂರನೇಯವರ ಮಧ್ಯ ಪ್ರವೇಶ ಬೇಕಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದು ಮತ್ತು ಉಗ್ರಗಾಮಿ-ಪೀಡಿತ ರಾಜ್ಯವನ್ನು ವಿಭಜಿಸುವುದು ಕಡ್ಡಾಯವಾಗಿ ಭಾರತದ ಆಂತರಿಕ ವಿಷಯವಾಗಿದೆ ಮತ್ತು ಇದರಿಂದ ಯಾವುದೇ ಬಾಹ್ಯ ಪರಿಣಾಮ ಆಗುವುದಿಲ್ಲ ಎಂದು ಹೇಳಿದ್ದಾರೆ.

ಸಂವಿಧಾನಾತ್ಮಕವಾಗಿಯೇ ಭಾರತ ಸರ್ಕಾರ ಸಂಸತ್ ನ ಅನುಮೋದನೆ ಪಡೆದೇ ವಿಧಿ 370ಅನ್ನು ರದ್ದು ಮಾಡಿದೆ. ಕಣಿವೆ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ಉದ್ದೇಶದಿಂದಲೇ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ದಬ್ಬಾಳಿಕೆ ನಡೆಸಲು ಅಲ್ಲ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗ. 

ಅಂತೆಯೇ ಕಾಶ್ಮೀರದಲ್ಲಿನ ನಿರ್ಬಂಧಗಳನ್ನು ಕ್ರಮೇಣ ಸಡಿಲಿಸಲು ಭಾರತ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತ ಬದ್ಧವಾಗಿದೆ. ಇಲ್ಲಿನ ಸಾಮಾಜಿಕ ಆರ್ಥಿಕ ಅಭಿವೃದ್ಧಿಯೇ ಭಾರತದ ಗುರಿ. ಇದನ್ನು ಸಾಧಿಸುವ ಸಂಬಂಧ ಎಂತಹ ಸಮಸ್ಯೆಗಳೇ ಎದುರಾದರೂ ಅದನ್ನು ನಿವಾರಿಸಿಕೊಂಡು ಗುರಿ ಸಾಧಿಸಲು ಭಾರತ ಬದ್ಧವಾಗಿದೆ. ಭವಿಷ್ಯದಲ್ಲಿ ಇನ್ನೆಂದೂ ಕಾಶ್ಮೀರದಲ್ಲಿ ರಕ್ತಪಾತಕ್ಕೆ ಅವಕಾಶ ನೀಡಬಾರದು ಎಂಬುದು ಭಾರತದ ಆಶಯವಾಗಿದೆ ಎಂದು ಅಕ್ಬರುದ್ದೀನ್ ಹೇಳಿದರು.

ನಿರ್ಬಂಧ ತೆರವಿಗೆ ಭಾರತ ಬದ್ಧ, ಆದರೆ ಪರಿಸ್ಥಿತಿ ಸುಧಾರಿಸಿದ ಬಳಿಕವಷ್ಟೇ
ಇದೇ ವೇಳೆ ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧಗಳ ಕುರಿತು ಮಾತನಾಡಿ ಅಕ್ಬರುದ್ದೀನ್ ಅವರು, ಕಾಶ್ಮೀರದಲ್ಲಿ ಉಗ್ರರ ದಾಳಿಗಳಿಂದ ನಾಗರೀಕರ ರಕ್ಷಣೆ ಮಾಡಲು ಕೆಲ ನಿರ್ಬಂದಗಳನ್ನು ಹೇರಲಾಗಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಕ್ರಮೇಣ ಹಂತ ಹಂತವಾಗಿ ಈ ನಿರ್ಬಂಧಗಳನ್ನು ತೆರವುಗೊಳಿಸುತ್ತೇವೆ. ಆದರೆ ಈ ಎಲ್ಲ ಬದಲಾವಣೆಗೂ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ ಎಂಬುದನ್ನು ಯಾರೂ ಮರೆಯಬಾರದು. ಕೆಲ ಸದಸ್ಯ ರಾಷ್ಟ್ರಗಳು ಕಾಶ್ಮೀರದಲ್ಲಿ ನೈಜ ಪರಿಸ್ಥಿತಿಯನ್ನು ತಿರುಚಿ ವಿಶ್ವಸಮುದಾಯಕ್ಕೆ ತಪ್ಪು ಮಾಹಿತಿ ನೀಡುತ್ತಿವೆ ಎಂದು ನೇರವಾಗಿಯೇ ಪಾಕಿಸ್ತಾನಕ್ಕೆ ಇರಿದರು.

ಅಂತೆಯೇ ಆ ರಾಷ್ಟ್ರದ ನಾಯಕರೂ ಕೂಡ ಜಿಹಾದ್ ಎಂಬ ಪರಿಭಾಷೆಯ ಮೂಲಕ ಭಾರತದಲ್ಲಿ ಧರ್ಮವನ್ನು ಹಿಂಸಾಚಾರಕ್ಕಾಗಿ ಬಳಕೆ ಮಾಡಲು ಉತ್ತೇಜಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೆಂದೇ ಭಾರತ ಸರ್ಕಾರ ಈ ನಿರ್ಣಯ ಕೈಗೊಂಡಿದೆ ಎಂದು ಹೇಳಿದರು.

ಇನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಸ್ಥಿತಿ ಸುಧಾರಿಸುತ್ತಿದೆ ಮತ್ತು ಶೀಘ್ರದಲ್ಲೇ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲಾಗುವುದು ಎಂದ ಬೆನ್ನಲ್ಲೇ ಅಕ್ಬರುದ್ದೀನ್‌ ಹೇಳಿಕೆ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com