ಬಿಯಾಂಕಾ-ಸೈಮಾ
ವಿದೇಶ
ಯುದ್ಧದ ಕಾರ್ಮೋಡದ ನಡುವೆ ಭಾರತ-ಪಾಕ್ ಸಲಿಂಗಿಗಳ ಅದ್ಧೂರಿ ಮದುವೆ, ವಿವಾಹ ನಡೆದದ್ದೆಲ್ಲಿ ಗೊತ್ತಾ!
ಭಾರತ-ಪಾಕ್ ನಡುವೆ ಪರಿಸ್ಥಿತಿ ಬಹಳ ಬಿಗಿಯಾಗಿ ಇನ್ನೇನು ಯುದ್ದವೇ ನಡೆದು ಹೋಗಲಿದೆಯೋ ಎನ್ನವಾಗಲೇ ಭಾರತ- ಪಾಕಿಸ್ತಾನಿ ಸಲಿಂಗ ಕಾಮಿಗಳಾದ ಬಿಯಾಂಕಾ ಮತ್ತು ಸೈಮಾ ಕ್ಯಾಲಿಫೋರ್ನಿಯಾದಲ್ಲಿ ಪರಸ್ಪರ ಗಂಟು ಹಾಕಿಕೊಂಡಿದ್ದಾರೆ.
ಇಸ್ಲಾಮಾಬಾದ್: ಭಾರತ-ಪಾಕ್ ನಡುವೆ ಪರಿಸ್ಥಿತಿ ಬಹಳ ಬಿಗಿಯಾಗಿ ಇನ್ನೇನು ಯುದ್ದವೇ ನಡೆದು ಹೋಗಲಿದೆಯೋ ಎನ್ನವಾಗಲೇ ಭಾರತ- ಪಾಕಿಸ್ತಾನಿ ಸಲಿಂಗ ಕಾಮಿಗಳಾದ ಬಿಯಾಂಕಾ ಮತ್ತು ಸೈಮಾ ಕ್ಯಾಲಿಫೋರ್ನಿಯಾದಲ್ಲಿ ಪರಸ್ಪರ ಗಂಟು ಹಾಕಿಕೊಂಡಿದ್ದಾರೆ.
ಗಾಂಧರ್ವ ವಿವಾಹವಾಗಿ ಬಹಳ ಅಪರೂಪದಲ್ಲಿನ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದಾರೆ. ನೋಡುಗರ ಕಣ್ಣಿಗೆ ಬೆರಗು ಹುಟ್ಟಿಸುವ ರೀತಿಯಲ್ಲಿ ಅವರಿಬ್ಬರ ವಿವಾಹದ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ..!
ವರದಿಗಳ ಪ್ರಕಾರ, ಕೊಲಂಬಿಯಾದ-ಭಾರತೀಯ ಕ್ರಿಶ್ಚಿಯನ್ ಬಿಯಾಂಕಾ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನಿ ಮುಸ್ಲಿಂ ಸೈಮಾ ಅವರನ್ನು ಭೇಟಿಯಾಗಿ ನಂತರ ಪ್ರೀತಿಸುತ್ತಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ