ಭ್ರಷ್ಟಾಚಾರ ಪ್ರಕರಣ: ಪಾಕ್ ಮಾಜಿ ಅಧ್ಯಕ್ಷ ಅಸಿಫ್‌ ಅಲಿ ಜರ್ದಾರಿ ಮತ್ತೆ ಬಂಧನ

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಪಾಕಿಸ್ತಾನ ಪೀಪಲ್‌ ಪಕ್ಷದ ಸಹ ಅಧ್ಯಕ್ಷ ಅಸಿಫ್‌ ಅಲಿ ಜರ್ದಾರಿ ಅವರನ್ನು ...
ಆಸಿಫ್ ಅಲಿ ಜರ್ದಾರಿ
ಆಸಿಫ್ ಅಲಿ ಜರ್ದಾರಿ
ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಪಾಕಿಸ್ತಾನ ಪೀಪಲ್‌ ಪಕ್ಷದ ಸಹ ಅಧ್ಯಕ್ಷ ಅಸಿಫ್‌ ಅಲಿ ಜರ್ದಾರಿ ಅವರನ್ನು ಸೋಮವಾರ ಮತ್ತೆ ಬಂಧಿಸಲಾಗಿದೆ.
ಭ್ರಷ್ಟಾಚಾರ ನಿಗ್ರಹ ಸಂಸ್ಥೆ ನ್ಯಾಷನಲ್ ಅಕೌಂಟಬಿಲಿಟಿ ಬ್ಯುರೋ(ಎನ್ ಎಬಿ)ದ ಅಧಿಕಾರಿಗಳು ಇಂದು ಜರ್ದಾರಿ ಅವರನ್ನು ಬಂಧಿಸಿದ್ದಾರೆ.
63 ವರ್ಷದ ಪಾಕ್ ಮಾಜಿ ಅಧ್ಯಕ್ಷ ಜರ್ದಾರಿ ಅವರು ನಕಲಿ ಬ್ಯಾಂಕ್ ಖಾತೆ ಮೂಲಕ 150 ಮಿಲಿಯನ್ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಎನ್ ಎಬಿ ಆರೋಪಿಸಿದೆ.
ಇತ್ತೀಚಿಗಷ್ಟೇ ನಕಲಿ ಬ್ಯಾಂಕ್ ಖಾತೆ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಎಬಿ ಜರ್ದಾರಿ ಹಾಗೂ ಅವರ ಸಹೋದರಿ ಫರ್ಯಾಲ್ ಅವರನ್ನು ಬಂಧಿಸಿತ್ತು. ಇದೀಗ ಮತ್ತೆ ಪಾಕ್ ಮಾಜಿ ಅಧ್ಯಕ್ಷರನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com