ಪಾಕಿಸ್ತಾನ: ಗ್ವಾಡರ್ ನಲ್ಲಿ ಫೈವ್ ಸ್ಟಾರ್ ಹೋಟೆಲ್ ಗೆ ನುಗ್ಗಿದ ಉಗ್ರರು

ಪಾಕಿಸ್ತಾನದ ಬಂದರು ನಗರಿ ಗ್ವಾಡಾರ್ ನ ಫೈವ್ ಸ್ಟಾರ್ ಹೋಟೆಲ್ ವೊಂದಕ್ಕೆ ಇಂದು ಕೆಲ ಶಸ್ತ್ರ ಸಜ್ಜಿತ ಉಗ್ರರು ನುಗ್ಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ಗ್ವಾಡಾರ್:  ಪಾಕಿಸ್ತಾನದ ಬಂದರು ನಗರಿ ಗ್ವಾಡಾರ್ ನ ಫೈವ್ ಸ್ಟಾರ್ ಹೋಟೆಲ್ ವೊಂದಕ್ಕೆ ಇಂದು ಕೆಲ ಶಸ್ತ್ರ ಸಜ್ಜಿತ ಉಗ್ರರು ನುಗ್ಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೂರ್ನಾಲ್ಕು ಉಗ್ರರು ಸೌಕರ್ಯ ಒದಗಿಸುವಂತೆ ಪೀಡಿಸಿದ ನಂತರ ಪಿಲ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಗ್ವಾಡಾರ್ ಠಾಣಾಧಿಕಾರಿ ಅಸ್ಲಾಂ ಬಾಂಗುಲ್ ಜಾಯ್  ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಯಾವುದೇ ಸಾವು ನೋವು, ಗಾಯಗಳಾದ ಬಗ್ಗೆ ವರದಿಯಾಗಿಲ್ಲ.  ಸುಮಾರು 4-50 ರ ಸುಮಾರಿನಲ್ಲಿ ಶಸ್ತ್ರ ಸಜ್ಜಿತ ಮೂರ್ನಾಲ್ಕು ಉಗ್ರರು ಹೋಟೆಲ್  ಗೆ ನುಗ್ಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com