ಇಸ್ರೋ ಕಾರ್ಯ ಸ್ಪೂರ್ತಿದಾಯಕ, ಜೊತಗೂಡಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ: ಚಂದ್ರಯಾನ-2 ಕುರಿತು ನಾಸಾ

ಚಂದ್ರಯಾನ-2 ಯೋಜನೆ ಮೂಲಕ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಯತ್ನವನ್ನು ಅಮೆರಿಕದ (ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ನಾಸಾ ಶ್ಲಾಘಿಸಿದೆ. 
ಇಸ್ರೋ ಕಾರ್ಯ ಸ್ಪೂರ್ತಿದಾಯಕ, ಜೊತಗೂಡಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ: ಚಂದ್ರಯಾನ-2 ಕುರಿತು ನಾಸಾ

ವಾಷಿಂಗ್ಟನ್: ಚಂದ್ರಯಾನ-2 ಯೋಜನೆ ಮೂಲಕ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಯತ್ನವನ್ನು ಅಮೆರಿಕದ (ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ನಾಸಾ ಶ್ಲಾಘಿಸಿದೆ. 

'ಬಾಹ್ಯಾಕಾಶವೆಂಬದು ತುಂಬಾ ಕಠಿಣವಾದುದು. ಚಂದ್ರಯಾನ-2 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಇಸ್ರೋದ ಪ್ರಯತ್ನವನ್ನು ನಾವು ಶ್ಲಾಘಿಸುತ್ತೇವೆ. ನಿಮ್ಮ ಬಾಹ್ಯಾಕಾಶ ಯೋಜನೆಯಿಂದ ನಾವು ಪ್ರೇರಣೆ ಪಡೆದಿದ್ದೇವೆ. ಭವಿಷ್ಯದಲ್ಲಿ ನಿಮ್ಮ ಜತೆಗೂಡಿ ಸೌರಮಂಡಲದ ಅಧ್ಯಯನ ನಡೆಸಲು ಬಯಸುತ್ತೇವೆ' ಎಂದು ನಾಸಾ ಟ್ವೀಟ್ ಮೂಲಕ ತಿಳಿಸಿದೆ.

ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ನೈ ಮೇಲೆ ಇಳಿಯಲು ಕೇವಲ 2.1 ಕಿಮೀ ದೂರವಿದ್ದಾಗ ಅದರ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಭಾರತದ ಈ ಮಹತ್ವಾಕಾಂಕ್ಷಿ ಯೋಜವೆ ಸಂಪೂರ್ಣ ಯಶಸ್ವಿಯಾಗಿರಲಿಲ್ಲ. ಚಂದ್ರನ ಮೇಲ್ಮೈ ಮೇಲೆ ಇಳಿಯುತ್ತಿದ್ದಂತೆಯೇ ಅದರ ಸಂಪರ್ಕ ಕಡಿತವಾಗಿತ್ತು. ಆದರೆ ಚಂದ್ರಯಾನ-2 ಯೋಜನೆ ಕುರಿತಂತೆ ವಿಶ್ವದಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com