'ಕಳೆದುಕೊಂಡಿದ್ದು ಸಂಪರ್ಕವಷ್ಟೇ, ಸಂಕಲ್ಪವನ್ನಲ್ಲ': ಚಂದ್ರಯಾನ 2ಗೆ ವಿದೇಶಿ ಮಾಧ್ಯಮಗಳ ಶ್ಲಾಘನೆ

ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಚಂದ್ರಯಾನ 2 ಯೋಜನೆಯಲ್ಲಿನ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಸಮೀಪಿಸುತ್ತಲೇ ಸಂಪರ್ಕ ಕಡಿದುಕೊಂಡಿದೆ. ಆದರೆ ಭಾರತದ ಈ ಯೋಜನೆಗೆ ಇಡೀ ವಿಶ್ವವೇ ಇಸ್ರೋ ಸಂಸ್ಥೆಯ ಪ್ರಯತ್ನನ್ನು ತುಂಬು ಹೃದಯದಿಂದ ಶ್ಲಾಘಿಸಿದೆ.

Published: 07th September 2019 03:11 PM  |   Last Updated: 07th September 2019 03:34 PM   |  A+A-


chandrayaan-2

ಸಂಗ್ರಹ ಚಿತ್ರ

Posted By : Srinivasamurthy VN
Source : PTI

ನವದೆಹಲಿ: ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಚಂದ್ರಯಾನ 2 ಯೋಜನೆಯಲ್ಲಿನ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಸಮೀಪಿಸುತ್ತಲೇ ಸಂಪರ್ಕ ಕಡಿದುಕೊಂಡಿದೆ. ಆದರೆ ಭಾರತದ ಈ ಯೋಜನೆಗೆ ಇಡೀ ವಿಶ್ವವೇ ಇಸ್ರೋ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದೆ.

ಹೌದು.. ಅಮೆರಿಕದ ನಾಸಾ ಸೇರಿದಂತೆ ಈ ವರೆಗೂ ಯಾವುದೇ ದೇಶವೂ ಕಾಲಿರಿಸದ ಚಂದ್ರನ ದಕ್ಷಿಣ ದ್ರುವದಲ್ಲಿ ರೋವರ್ ಇಳಿಸಲು ಸಜ್ಜಾಗಿದ್ದ ಭಾರತದ ಇಸ್ರೋ, ಇದೇ ಸುದ್ದಿಯಿಂದಾಗಿ ವಿಶ್ವಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೇ ಕಾರಣಕ್ಕಾಗಿ ನಿನ್ನೆಯ ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ನ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಕೇವಲ ಭಾರತೀಯರು ಮಾತ್ರವಲ್ಲದೇ ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿತ್ತು. ಆದರೆ ನಿನ್ನೆಯ ಕಾರ್ಯಾಚರಣೆಯಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ತಲುಪಲು ಕೇವಲ 2.1 ಕಿಮೀ ದೂರ ಅಂತರವಿದ್ದಾಗ ಇಸ್ರೋ ನಿಯಂತ್ರಣ ಕೊಠಡಿಯ ಸಂಪರ್ಕ ಕಡಿದುಕೊಂಡಿತು. ಆ ಮೂಲಕ ಕೋಟ್ಯಂತರ ಭಾರತೀಯರ ಆಸೆ ನುಚ್ಚು ನೂರಾಯಿತು.

ಇನ್ನು ಇಸ್ರೋದ ಈ ಮಹತ್ವಾಕಾಂಕ್ಷಿ ಯೋಜನೆ ಕುರಿತು ಜಾಗತಿಕ ಮಾಧ್ಯಮಗಳು ಬೆಂಬಲದ ಮಾತುಗಳನ್ನಾಡಿದ್ದು, ಇಂದು ಪ್ರಕಟವಾಗಿರುವ ವಿಶ್ವದ ಪ್ರಮುಖ ಪತ್ರಿಕೆಗಳು, ಮಾಧ್ಯಮಗಳು ಮತ್ತು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಅಮೆರಿಕದ ಖ್ಯಾತ ಮ್ಯಾಗಜಿನ್ ವೈರ್ಡ್, ಸಂಪೂರ್ಣ ನಷ್ಟವಾಗಿಲ್ಲ. ನಿರೀಕ್ಷಿತ ಪಥ ಬದಲಾವಣೆ, ಚಂದ್ರನ ಮೇಲ್ಮೈ ಮೇಲೆ ಇಳಿಯಬೇಕಿದ್ದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಇಸ್ರೋದ ಸಂಪರ್ಕಕಡಿತಗೊಂಡಿದೆ. ಇದು ಭಾರತೀಯ ಬಾಹ್ಯಾಕಾಶ ಯೋಜನೆಗಳಿಗಾದ ಭಾರಿ ಹಿನ್ನಡೆಯಾಗಿದೆಯಾದರೂ, ಇಡೀ ಯೋಜನೆ ವಿಫಲವಾಗಿಲ್ಲ, ಲೂನಾರ್ ಆರ್ಬಿಟ್ ಇನ್ನೂ ಚಂದ್ರನ ಕಕ್ಷೆಯಲ್ಲೇ ಇದ್ದೂ, ಮುಂದಿನ ಒಂದು ವರ್ಷಗಳ ಕಾಲ ಚಂದ್ರನ ಮೇಲ್ಮೈ ಅಧ್ಯಯನ ಮಾಡಲಿದೆ ಎಂದು ವರದಿ ಮಾಡಿದೆ.

ಇದೇ ವಿಚಾರವಾಗಿ ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್ 'ಭಾಗಶಃ ವೈಫಲ್ಯ', ಚಂದ್ರನ ಕಕ್ಷೆಯಲ್ಲೇ ಆರ್ಬಿಟರ್ ಅಧ್ಯಯನ ಎಂದು ಚಂದ್ರಯಾನ 2 ಕುರಿತು ವರದಿ ಮಾಡಿದೆ. ಅಂತೆಯೇ ಚಂದ್ರನ ಮೇಲ್ಮೈ ಮೇಲೆ ರೋವರ್ ಇಳಿಸಿದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತದ ಸೇರ್ಪಡೆ ನಿಧಾನವಾಗಲಿದೆ ಎಂದು ಹೇಳಿದೆ. ಇದೇ ವಿಚಾರವಾಗಿ ಲೇಖನ ಬರೆದಿರುವ ಫ್ರಾನ್ಸ್ ಲೆ ಮಾಂಡೆ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಡೆದ ಕನಸು ಎಂಬ ಶೀರ್ಷಿಕೆ ನೀಡಿದೆ. 

ಬ್ರಿಟನ್ ನ ದಿ ಗಾರ್ಡಿಯನ್ ಪತ್ರಿಕೆ, ಭಾರತದ ಚಂದ್ರನ ಮೇಲಿನ ಲ್ಯಾಂಡಿಂಗ್ ಯೋಜನೆ ಕೊನೆಯ ಕ್ಷಣದ ಸಂವಹನ ಕಡಿತ ಸಮಸ್ಯೆಗೀಡಾಗಿದೆ ಎಂದು ವರದಿ ಮಾಡಿದೆ. ಅಂತೆಯೇ 'ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತ ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ ಎಂದು ವರದಿ ಮಾಡಿದೆ. ಚಂದ್ರನ ಮೇಲ್ಮೈ ಮೇಲೆ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ ದೇಶಗಳ ಪೈಕಿ ಕೇವಲ ಅರ್ಧದಷ್ಟು ದೇಶಗಳು ಮಾತ್ರ ಯಶಸ್ವಿಯಾಗಿದೆ ಎಂದು ಹೇಳಿದೆ.

ಅಂತೆಯೇ ಸಿಎನ್ಎನ್ ಕೂಡ ಈ ಬಗ್ಗೆ ವರದಿ ಮಾಡಿದ್ದು, ಭಾರತದ ಐತಿಹಾಸಿಕ ಚಂದ್ರಯಾನ 2 ಯೋಜನೆ ಲೂನಾರ್ ಲ್ಯಾಂಡಿಂಗ್ ಭಾಗಶಃ ವಿಫಲ ಎಂದು ಹೇಳಿದೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp