ಚೀನಾದಲ್ಲಿ ಭೀಕರ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲು, 12 ಮಂದಿ ಸಾವು!

ಚೀನಾದಲ್ಲಿ ಭೀಕರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0ಯಷ್ಟು ತೀವ್ರತೆ ದಾಖಲಾಗಿದೆ. ಅಂತೆಯೇ ಭೂಕಂಪನದಿಂದ ಸಂಭವಿಸಿದ ವಿವಿಧ ಘಟನೆಗಳಲ್ಲಿ12 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಚೀನಾದಲ್ಲಿ ಭೂಕಂಪನ
ಚೀನಾದಲ್ಲಿ ಭೂಕಂಪನ
ಬೀಜಿಂಗ್: ಚೀನಾದಲ್ಲಿ ಭೀಕರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0ಯಷ್ಟು ತೀವ್ರತೆ ದಾಖಲಾಗಿದೆ. ಅಂತೆಯೇ ಭೂಕಂಪನದಿಂದ ಸಂಭವಿಸಿದ ವಿವಿಧ ಘಟನೆಗಳಲ್ಲಿ12 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಚೀನಾದ ಸಿಚುವಾನ್‌ ಪ್ರಾಂತ್ಯದ ಯಿಬಿನ್‌ ನಗರದಲ್ಲಿ ಸೋಮವಾರ ರಾತ್ರಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಈ ವರೆಗೂ 11 ಮಂದಿ ಸಾವನ್ನಪ್ಪಿದ್ದು, 134 ಮಂದಿ ಗಾಯಗೊಂಡಿದ್ದಾರೆ. 
ಚಾಂಗ್‌ನಿಂಗ್ ಕೌಂಟಿಯಲ್ಲಿ ಹೋಟೆಲ್ ವೊಂದರ ಕಟ್ಟಡ ಕುಸಿದುಬಿದ್ದಿದ್ದು, ರಸ್ತೆಗಳು ಬಿರಕುಬಿಟ್ಟಿವೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಪ‍್ರಗತಿಯಲ್ಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಆರಂಭವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com