ಗಾಜಾ ಪಟ್ಟಿ ಮೇಲೆ ಇಸ್ರೇಲ್ ರಾಕೆಟ್ ಸ್ಟ್ರೈಕ್!

ಇರಾನ್-ಇಸ್ರೇಲ್ ನಡುವಿನ ಸಮರ ತಾರಕಕ್ಕೇರಿದ್ದು, ಇರಾನ್ ಮಿಸೈಲ್ ದಾಳಿ ನಡೆಸಿದ ಪರಿಣಾಮ ಇಸ್ರೇಲ್ ಕೂಡ ಗಾಜಾಪಟ್ಟಿ ಮೇಲೆ ರಾಕೆಟ್ ಸ್ಟ್ರೈಕ್ ಮಾಡಿದೆ.

Published: 15th March 2019 12:00 PM  |   Last Updated: 15th March 2019 10:02 AM   |  A+A-


Israel says rockets fired at it from Gaza, launches retaliatory strikes

ಸಂಗ್ರಹ ಚಿತ್ರ

Posted By : SVN SVN
Source : ANI
ಟೆಲ್ ಅವೀವ್: ಇರಾನ್-ಇಸ್ರೇಲ್ ನಡುವಿನ ಸಮರ ತಾರಕಕ್ಕೇರಿದ್ದು, ಇರಾನ್ ಮಿಸೈಲ್ ದಾಳಿ ನಡೆಸಿದ ಪರಿಣಾಮ ಇಸ್ರೇಲ್ ಕೂಡ ಗಾಜಾಪಟ್ಟಿ ಮೇಲೆ ರಾಕೆಟ್ ಸ್ಟ್ರೈಕ್ ಮಾಡಿದೆ.

ಗಾಜಾಪಟ್ಟಿ ಮೇಲೆ ಇಸ್ರೇಲ್ ಹಲವು ರಾಕೆಟ್ ಗಳನ್ನು ಉಡಾಯಿಸಿದ್ದು, ಈ ಪೈಕಿ ಒಂದು ರಾಕೆಟ್ ಅನ್ನು ಇರಾನ್ ಡೋಮ್ ಮಿಸೈಲ್ ಸಿಸ್ಟಮ್ ತನ್ನ ರಾಡಾರ್ ಮೂಲಕ ಪತ್ತೆ ಮಾಡಿದೆ. ಅಂತೆಯೇ ಮತ್ತೊಂದು ರಾಕೆಟ್ ಬಹಿರಂಗ ಪ್ರದೇಶದ ಮೇಲೆ ಬಿದ್ದಿದೆ ಎಂದು ಇರಾನ್ ಆರೋಪಿಸಿದೆ. 

ಇಸ್ರೇಲ್ ಸೇನಾ ಮೂಲಗಳು ತಿಳಿಸಿರುವಂತೆ ಇರಾನ್ ಮಿಸೈಲ್ ದಾಳಿ ಪ್ರತಿಯಾಗಿ ತಾನು ರಾಕೆಟ್ ದಾಳಿ ನಡೆಸಿದ್ದು, ತನ್ನ ಫಜ್ರ್ (Fajr rockets) ರಾಕೆಟ್ ಗಳನ್ನು ಬಳಕೆ ಮಾಡಿ ದಾಳಿ ಮಾಡಲಾಗಿದೆ. ಈ ದಾಳಿ ಯಾವುದೇ ನಿರ್ದಿಷ್ಠ ಗುರಿಗಳನ್ನು ಹೊಂದಿರಲಿಲ್ಲ. ಆದರೆ ಪ್ರತಿದಾಳಿ ತಾನು ಸಿದ್ಧ ಸಂದೇಶ ರವಾನೆಗಾಗಿ ತಾನು ರಾಕೆಟ್ ದಾಳಿ ನಡೆಸಿರುವುದಾಗಿ ಇಸ್ರೇಲ್ ಪಡೆಗಳು ಎಚ್ಚರಿಕೆ ನೀಡಿವೆ. ಆದರೆ ಗಾಜಾಪಟ್ಟಿಯಿಂದ ಉಡಾವಣೆಯಾದ ಮಿಸೈಲ್ ದಾಳಿಗೆ ಈ ವರೆಗೂ ಇರಾನ್ ಸೇನೆಯಾಗಲಿ ಅಥವಾ ಅಲ್ಲಿನ ಉಗ್ರ ಪಡೆಗಳಾಗಲಿ ಜವಾಬ್ದಾರಿ ಹೊತ್ತಿಲ್ಲ. 

ಇನ್ನು 2 ವರ್ಷಗಳ ಹಿಂದೆ ಇರಾನ್ ಮತ್ತು ಇಸ್ರೇಲ್ ನಡುವೆ ರಾಕೆಟ್ ದಾಳಿ ಅಲಾರ್ಮ್ ಮೊಳಗಿಸಲಾಗಿತ್ತು, ಅಲ್ಲಿಂದ ಇದೇ ಮೊದಲ ಬಾರಿಗೆ ಮತ್ತೆ ರಾಕೆಟ್ ದಾಳಿಯ ಅಲಾರ್ಮ್ ಮೊಳಗಿಸಲಾಗಿದೆ. ಅಂತೆಯೇ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಪಡೆಗಳು ಉಗ್ರರ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp