'ಎಲ್ಲ ಪ್ರಯತ್ನಗಳೂ ಮುಗಿದಿದೆ'; ಮತ್ತೆ ಚುನಾವಣೆಯತ್ತ ಇಸ್ರೇಲ್!

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರಿಗೂ ಭಿನ್ನಮತದ ಬಿಸಿ ತಟ್ಟಿದ್ದು, ತಿಂಗಳ ಹಿಂದಷ್ಟೇ ನೆತಾನ್ಯಹು ಅವರ ಮೈತ್ರಿಕೂಟ ಚುನಾವಣೆಯಲ್ಲಿ ಗೆದ್ದಿತ್ತು. ಆದರೆ ನೇತಾನ್ಯಹು ಸರ್ಕಾರ ರಚನೆ ಮಾಡುವಲ್ಲಿ ವಿಫಲರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚುನಾವಣೆ ಗೆದ್ದರೂ ನೆತಾನ್ಯಹುಗಿಲ್ಲ ಸರ್ಕಾರ ರಚನೆ ಭಾಗ್ಯ, ಬೆಂಬಲ ಸಿಗದೇ ಇಸ್ರೇಲ್ ಮಾಜಿ ಪ್ರಧಾನಿ ಕಂಗಾಲು

ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರಿಗೂ ಭಿನ್ನಮತದ ಬಿಸಿ ತಟ್ಟಿದ್ದು, ತಿಂಗಳ ಹಿಂದಷ್ಟೇ ನೆತಾನ್ಯಹು ಅವರ ಮೈತ್ರಿಕೂಟ ಚುನಾವಣೆಯಲ್ಲಿ ಗೆದ್ದಿತ್ತು. ಆದರೆ ನೇತಾನ್ಯಹು ಸರ್ಕಾರ ರಚನೆ ಮಾಡುವಲ್ಲಿ ವಿಫಲರಾಗಿದ್ದಾರೆ.

ಹೌದು.. ಇತ್ತೀಚೆಗೆ ನಡೆದ ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ನೇತಾನ್ಯಹು ನೇತೃತ್ವದ ಮೈತ್ರಿಕೂಟ ಜಯಭೇರಿ ಭಾರಿಸಿದ್ದರೂ, ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿದೆ. ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್ ನಂಬರ್ ಕಲೆಹಾಕುವಲ್ಲಿ ನೇತಾನ್ಯಹು ವಿಫಲರಾಗಿದ್ದು, ಇದೇ ಕಾರಣಕ್ಕೆ ಇದೀಗ ಇಸ್ರೇಲ್ ಮತ್ತೆ ಚುನಾವಣೆಯತ್ತ ಮುಖ ಮಾಡಿದೆ.

ಇದೇ ವಿಚಾರವನ್ನು ಸ್ವತಃ ಬೆಂಜಮಿನ್ ನೆತಾನ್ಯಹು ಅವರು ಬಹಿರಂಗ ಪಡಿಸಿದ್ದು, ನಾನು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದೇನೆ. ಆದರೆ ವಿಪಕ್ಷನಾಯಕ ಬೆನ್ನಿ ಗ್ಯಾಂಟ್ಜ್ ಸಂಧಾನಕ್ಕೆ ಒಪ್ಪುತ್ತಿಲ್ಲ. ಅವರಿಗೆ ದೇಶದ ಹಿತಾಸಕ್ತಿಗಿಂತ ತಮ್ಮ ರಾಜಕೀಯ ಮತ್ತು ದ್ವೇಷವೇ ಮುಖ್ಯವಾಗಿದೆ ಎಂದು ನೇತಾನ್ಯಹು ಕಿಡಿಕಾರಿದ್ದಾರೆ. ಅಲ್ಲದೆ ಬೆನ್ನಿ ಗ್ಯಾಂಟ್ಜ್ ಉಗ್ರರ ಪೋಷಣೆ ಮಾಡುತ್ತಿರುವ ಮತ್ತು ಇಸ್ರೇಲ್ ಅಸ್ತಿತ್ವವನ್ನು ಸಹಿಸದ ಅರಬ್ ಮೂಲದ ರಾಜಕೀಯ ಮುಖಂಡರೊಂದಿಗೆ ಕೈ ಜೋಡಿಸಿದ್ದಾರೆ. ಇದೇ ಕಾರಣಕ್ಕೆ ಅವರು ಸರ್ಕಾರ ರಚನೆಗೆ ನಮ್ಮೊಂದಿಗೆ ಕೈ ಜೋಡಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಾನು ಮತ್ತೊಮ್ಮೆ ಚುನಾವಣೆ ಬೇಡ. ಅದನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದಾನೆ. ಆದರೆ ಗಾಂಟ್ಜ್ ಹಠಮಾರಿ ಧೋರಣೆ ದೇಶವನ್ನು ಮತ್ತೊಂದು ಚುನಾವಣೆಯತ್ತ ತಳ್ಳುತ್ತಿದೆ ಎಂದು ನೇತಾನ್ಯಹು ಆರೋಪಿಸಿದ್ದಾರೆ.

ಇನ್ನು ಇತ್ತೀಚೆಗೆ ನಡೆದ ಇಸ್ರೇಲ್ ಚುನಾವಣೆಯಲ್ಲಿ ನೇತಾನ್ಯಹು ನೇತೃತ್ವ ಲಿಕುಡ್ ಪಾರ್ಟಿ, ಅವರ ಎದುರಾಳಿ ಗಾಂಟ್ಜ್ ಅವರ ಬ್ಲೂ ಅಂಡ್ ವೈಟ್ ಪಾರ್ಟಿ ದೊಡ್ಡ ಪಕ್ಷಗಳಾಗಿ ಹೊರಹೊಮ್ಮಿದ್ದವು. ಆದರೆ ಯಾವ ಪಕ್ಷವೂ ಕೂಡ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಆದರೆ ಗಾಂಟ್ಜ್ ಅವರ ಬ್ಲೂ ಅಂಡ್ ವೈಟ್ ಪಾರ್ಟಿ ನೇತಾನ್ಯಹು ಅವರಿಗೆ ಬೆಂಬಲ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಇನ್ನೂ ಆ ಪಕ್ಷ ಯಾವುದೇ ನಿರ್ಣಯ ಕೈಗೊಳ್ಳದೇ ಮತ್ತೆ ಚುನಾವಣೆ ಎದುರುನೋಡುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com