ಪುಟಿನ್‍ರೊಂದಿಗೆ ಹಡಗು ನಿರ್ಮಾಣ ಸಂಕೀರ್ಣಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೊತೆ ಇಲ್ಲಿನ ಜ್ವೇಡಿಯಾ ಹಡಗು ನಿರ್ಮಾಣ ಸಂಕೀರ್ಣಕ್ಕೆ ಭೇಟಿ ನೀಡಿದರು.
ಶಿಪ್ ಯಾರ್ಡ್ ನಲ್ಲಿ ಪ್ರಧಾನಿ ಮೋದಿ ವ್ಲಾಡಿಮಿರ್ ಪುಟಿನ್ (ಚಿತ್ರ: ಎಎನ್ಐ)
ಶಿಪ್ ಯಾರ್ಡ್ ನಲ್ಲಿ ಪ್ರಧಾನಿ ಮೋದಿ ವ್ಲಾಡಿಮಿರ್ ಪುಟಿನ್ (ಚಿತ್ರ: ಎಎನ್ಐ)
Updated on

ವ್ಲಾಡಿವೋಸ್ಟಾಕ್:  ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೊತೆ ಇಲ್ಲಿನ ಜ್ವೇಡಿಯಾ ಹಡಗು ನಿರ್ಮಾಣ ಸಂಕೀರ್ಣಕ್ಕೆ ಭೇಟಿ ನೀಡಿದರು.

ಮಂಗಳವಾರ ದೆಹಲಿಯಿಂದ ನಿರ್ಗಮಿಸುವ ಮೊದಲು ಪ್ರಧಾನಿ ಮೋದಿ ಟ್ವೀಟ್ ಮಾಡಿ, ಜ್ವೆಜ್ಡಾ ಹಡಗು ನಿರ್ಮಾಣ ಸಂಕೀರ್ಣಕ್ಕೆ ಭೇಟಿ ನೀಡಿದಾಗ "ಹಡಗು ನಿರ್ಮಾಣ ಕ್ಷೇತ್ರದಲ್ಲಿ ರಷ್ಯಾದ ಅನುಕರಣೀಯ ಸಾಮರ್ಥ್ಯಗಳ ಬಗ್ಗೆ ತಿಳಿಯಲು ಮತ್ತು ಸಹಕಾರದ ಸಾಧ್ಯತೆಗಳನ್ನು ಅನ್ವೇಷಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ" ಎಂದು ತಿಳಿಸಿದ್ದರು.

ಪ್ರಧಾನಿ ಹಡಗು ನಿರ್ಮಾಣ ಸಂಕೀರ್ಣಕ್ಕೆ ಭೇಟಿ ನೀಡಿದಾಗ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಜೊತೆಗಿದ್ದರು.

ಇದಕ್ಕೂ ಮೊದಲು ಇಲ್ಲಿಗೆ ಬಂದ ತಕ್ಷಣ ಪ್ರಧಾನಿ ಮೋದಿ ಟ್ವೀಟ್ ಮಾಡಿ, ರಷ್ಯಾದ ಫಾರ್ ಈಸ್ಟ್ ರಾಜಧಾನಿ ಮತ್ತು ಕ್ರಿಯಾತ್ಮಕ ಪ್ರದೇಶವಾಗಿರುವ ವ್ಲಾಡಿವೋಸ್ಟಾಕ್‌ನಲ್ಲಿ ಬಂದಿಳಿದಿದ್ದೇನೆ, ಈ ಸಣ್ಣ ಆದರೆ ಮಹತ್ವದ ಭೇಟಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಜ್ವೆಜ್ಡಾ ಶಿಪ್‌ಯಾರ್ಡ್ ಎಂಬುದು, ಯುನೈಟೆಡ್ ಶಿಪ್ ಬಿಲ್ಡಿಂಗ್ ಕಾರ್ಪೊರೇಶನ್‌ನ ಒಡೆತನದ ರಷ್ಯಾದ ಫಾರ್ ಈಸ್ಟ್ ಬೊಲ್ಶಾಯ್ ಕಾಮೆನ್ ಪಟ್ಟಣದಲ್ಲಿರುವ ದೊಡ್ಡ ಹಡಗು ನಿರ್ಮಾಣ ಮತ್ತು ಎಂಜಿನಿಯರಿಂಗ್ ಸಂಕೀರ್ಣವಾಗಿದೆ.

"ಭಾರತದ ಪ್ರಧಾನ ಮಂತ್ರಿಯಾಗಿ, ಪ್ರಥಮ ರಷ್ಯಾದ ಫಾರ್ ಈಸ್ಟ್ ಪ್ರದೇಶಕ್ಕೆ ನನ್ನ ಭೇಟಿಯು ನಮ್ಮ ದೃಢವಾದ ದ್ವಿಪಕ್ಷೀಯ ಸಂಬಂಧಗಳನ್ನು ವೈವಿಧ್ಯಗೊಳಿಸಲು ಮತ್ತು ಮತ್ತಷ್ಟು ಬಲಪಡಿಸುವ ಎರಡೂ ಕಡೆಯ ಆಸಕ್ತಿಯನ್ನು ಒತ್ತಿ ಹೇಳುತ್ತಿದೆ ಎಂದು ಅವರು ಹೇಳಿದರು.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ 5ನೇ ಪೂರ್ವ ಆರ್ಥಿಕ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವುದು ಮತ್ತು ಅವರೊಂದಿಗೆ 20ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯನ್ನು ನಡೆಸುವುದು ನನ್ನ ಭೇಟಿಯ ಉದ್ದೇಶ ಎಂದು ಪ್ರಧಾನಿ ಮಂಗಳವಾರ ದೆಹಲಿಯಲ್ಲಿ ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com