ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲ ನಿಲ್ಲಿಸದ ಹೊರತು ಪಾಕ್ ಜೊತೆ ಕ್ರಿಕೆಟ್ ಇಲ್ಲ: ಭಾರತ

ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪದೇ ಪದೇ ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬವಲವನ್ನು ಸಂಪೂರ್ಣವಾಗಿ ನಿಲ್ಲಿಸದ ಹೊರತು ಆ ದೇಶದೊಂದಿಗೆ ಕ್ರಿಕೆಟ್ ಆಡುವುದಿಲ್ಲ ಎಂದು ಭಾರತ ಬುಧವಾರ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನ್ಯೂಯಾರ್ಕ್: ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪದೇ ಪದೇ ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬವಲವನ್ನು ಸಂಪೂರ್ಣವಾಗಿ ನಿಲ್ಲಿಸದ ಹೊರತು ಆ ದೇಶದೊಂದಿಗೆ ಕ್ರಿಕೆಟ್ ಆಡುವುದಿಲ್ಲ ಎಂದು ಭಾರತ ಬುಧವಾರ ಹೇಳಿದೆ. 


ನ್ಯೂಯಾರ್ಕ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ. 

ಪಾಕಿಸ್ತಾನ ಬಾರದಲ್ಲಿ ಹಿಂಸಾಚಾರ, ಉಗ್ರರು, ಬಾಂಬ್ ಗಳನ್ನು ಹಾಕುತ್ತಿದೆ. ಸದಾಕಾಲ ಭಾರತದ ಮೇಲೆ ವಿಧ್ವಂಸಕ ಕೃತ್ಯವೆಸಗಲು ಹೊಂಚು ಹಾಕುತ್ತಿರುತ್ತದೆ. ಇಷ್ಟಾದರೂ ಅಂತಹ ರಾಷ್ಟ್ರದೊಂದಿಗೆ ಟೀ ಬ್ರೇಕ್ ತೆಗೆದುಕೊಳ್ಳುವುದು, ನಗು ಮುಖದಿಂದ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಇತ್ತೀಚೆಗಷ್ಟೇ ಕಾಶ್ಮೀರದ ಉರಿ, ಪಠಾಣ್ ಕೋಟ್ ಹಾಗೂ ಪುಲ್ವಾಮಾ ದಾಳಿಯನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿರುವ ಜೈಶಂಕರ್ ಅವರು, ಜನರನ್ನು ಮಾರಾಟ ಮಾಡುವುದು ಅತ್ಯಂತ ಕಠಿಣವಾದದ್ದು, ಇದು ಪ್ರಜಾಪ್ರಭುತ್ವ. ಇಲ್ಲಿ ಭಾವನೆಗಳು ಮುಖ್ಯವಾಗಿರುತ್ತದೆ. ರಾತ್ರಿ ವೇಳೆ ಭಯೋತ್ಪಾದನಾ ಚಟುವಟಿಕೆಗಳನ್ನು ಮಾಡಿ, ಬೆಳಿಗ್ಗೆ ಎಂದಿನಂತೆ ವ್ಯವಹಾರ ನಡೆಸಲು ಸಾಧ್ಯವಿಲ್ಲ. ವಿಚಾರವನ್ನು ಇಬ್ಬಾಗ ಮಾಡುವುದು ನಿಜ ಜೀವನದಲ್ಲಿ ಅತ್ಯಂತ ಕಠಿಣವಾಗಿರುತ್ತದೆ. ಭಯೋತ್ಪಾದನೆ ವಿರುದ್ಧದ ಹೋರಾಟದತ್ತ ಭಾರತದ ಚಿತ್ತವಿದೆ. ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಇಡೀ ವಿಶ್ವಕ್ಕೆ ಕರೆ ನೀಡಿದೆ. 

ವಿಶ್ವದ ನಾನಾ ಭಾಗಗಳಲ್ಲಿರುವ ಭಯೋತ್ಪಾದನೆಯಲ್ಲಿ ನಿಮ್ಮ ಪಾತ್ರವಿದೆ. ಆದರೆ, ನೆರೆ ರಾಷ್ಟ್ರದೊಂದಿಗೆ ದೊಡ್ಡ ಪ್ರಮಾಣದ ಉದ್ಯಮವಾಗಿ, ಪ್ರಜ್ಞಾಪೂರ್ವಕವಾಗಿ ಯಾವುದೇ ರೀತಿಯ ಭಾಗಗಳನ್ನು ಹೊಂದಿಲ್ಲ. ಹಲವು ವರ್ಷಗಳಿಂದಲೂ ಪಾಕಿಸ್ತಾನ ಭಾರತದ ವಿರುದ್ಧ ಹಗೆ ತೀರಿಸಿಕೊಳ್ಳಲು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ. ಪಾಕಿಸ್ತಾನ ಸೇನೆ ಕೂಡ ಉಗ್ರರೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಗಡಿ ನಿಯಂತ್ರಣ ರೇಖೆ ಬಳಿ ಹಾಗೂ ಅಂತರಾಷ್ಟ್ರೀಯ ಗಡಿಯಲ್ಲಿ ಉಗ್ರರನ್ನು ಭಾರತದೊಳಗೆ ನುಸುಳಿಸಲು ಸಹಾಯ ಮಾಡುತ್ತಿವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com