ಎರಡು ತಿಂಗಳ ಮಗುವಿಗೆ ಕೊವಿಡ್-19: ಕೊರೋನಾ ಗೆದ್ದುಬಂದ ಇಟಲಿಯ ಅತ್ಯಂತ ಕಿರಿಯ!

ಇಟಲಿಯ ಅತ್ಯಂತ ಕಿರಿಯ ಕೊವಿಡ್-19 ರೋಗಿ, ಎರಡು ತಿಂಗಳ ಮಗು ಮಹಾಮಾರಿ ಕೊರೋನಾ ವೈರಸ್ ಗೆದ್ದುಬಂದಿದ್ದು, ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಗುರುವಾರ ಮಾಧ್ಯಮಗಳು ವರದಿ ಮಾಡಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ರೋಮ್: ಇಟಲಿಯ ಅತ್ಯಂತ ಕಿರಿಯ ಕೊವಿಡ್-19 ರೋಗಿ, ಎರಡು ತಿಂಗಳ ಮಗು ಮಹಾಮಾರಿ ಕೊರೋನಾ ವೈರಸ್ ಗೆದ್ದುಬಂದಿದ್ದು, ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಗುರುವಾರ ಮಾಧ್ಯಮಗಳು ವರದಿ ಮಾಡಿವೆ.

ಮಗುವಿಗೆ ಈಗ ಯಾವುದೇ ಜ್ವರ ಇಲ್ಲ ಮತ್ತು ಕೊರೋನಾ ವೈರಸ್ ನೆಗಟಿವ್ ಬಂದಿದೆ. ಹೀಗಾಗಿ ಮಗು ಮತ್ತು ತಾಯಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ತಾಯಿ ಸಹ ನ್ಯುಮೋನಿಯಾದಿಂದ ಚೇತರಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಾರ್ಚ್ 18ರಂದು ತಾಯಿ ಮತ್ತು ಮಗು ಇಬ್ಬರು ಬರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇಟಲಿಯಲ್ಲಿ ಕೊರೋನಾ ವೈರಸ್ ಗೆ ಇದುವರೆಗೆ 17,669 ಮಂದಿ ಬಲಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com