ವಾಷಿಂಗ್ಟನ್: ಗುವಾಮ್‌ನಲ್ಲಿ ಲಂಗರು ಹಾಕಿರುವ ಪರಮಾಣು ಇಂಧನ ಚಾಲಿತ ವಿಮಾನ ಹೊತ್ತೊಯ್ಯವ ನೌಕೆಯಾದ ಯುಎಸ್‌ಎಸ್ ಥಿಯೋಡರ್ ರೂಸ್‌ವೆಲ್ಟ್‌ನ ಕನಿಷ್ಠ 710 ಸಿಬ್ಬಂದಿಯಲ್ಲಿ ಕೊವಿಡ್-19 ಸೋಂಕು ದೃಢಪಟ್ಟಿದೆ ಎಂದು ಅಮೆರಿಕ ನೌಕಾಪಡೆ ತಿಳಿಸಿದೆ.
ನೌಕಾಪಡೆ ಮಂಗಳವಾರ ನೀಡಿದ ವರದಿಯಲ್ಲಿ ಶೇ 94ರಷ್ಟು ಸಿಬ್ಬಂದಿಯನ್ನು ಪರೀಕ್ಷಿಸಲಾಗಿದ್ದು, ಕನಿಷ್ಠ 3,872 ಸಿಬ್ಬಂದಿಯಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಮಾರಕ ರೋಗದಿಮದ ಒಂಬತ್ತು ನಾವಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ
Advertisement