ಅಮೆರಿಕಾದಲ್ಲಿ 2 ಸಾಕು ಬೆಕ್ಕುಗಳಿಗೆ ಕೊರೋನಾ ಸೋಂಕು!

ಕೊರೋನಾ ವೈರಸ್ ಇದೀಗ ಬೆಕ್ಕುಗಳಿಗೂ ತಟ್ಟಿದೆ. ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಎರಡು ಸಾಕು ಬೆಕ್ಕುಗಳಿಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನ್ಯೂಯಾರ್ಕ್: ಕೊರೋನಾ ವೈರಸ್ ಇದೀಗ ಬೆಕ್ಕುಗಳಿಗೂ ತಟ್ಟಿದೆ. ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಎರಡು ಸಾಕು ಬೆಕ್ಕುಗಳಿಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. 

ವಿಶ್ವದಲ್ಲೇ ಅತೀ ಹೆಚ್ಚು ಸೋಂಕಿತರಿರುವ ಅಮೆರಿಕಾದಲ್ಲಿ ಸಾಕು ಪ್ರಾಣಿಗಳಲ್ಲಿ ಸೋಂಕು ಕಾಣಿಸಿಕೊಂಡ ಪ್ರಕರಣದ ಇದೇ ಮೊದಲು ಎಂದು ಹೇಳಲಾಗುತ್ತಿದೆ. 

ಈ ಬೆಕ್ಕುಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಕೊರೋನಾ ಶಂಕೆಯಿಂದ ಪರೀಕ್ಷೆ  ಮಾಡಲಾಗಿತ್ತು. ವರದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ಸೋಂಕು ಬಾಧಿತರೊಂದಿಗಿನ ಸಂಪರ್ಕದಿಂದಾಗಿ ಬೆಕ್ಕಿಗ ಈ ವ್ಯಾಧಿ ಬಂದಿರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಮೃಗಾಲಯವೊಂದರ ಹುಲಿಯಲ್ಲಿ ಸೋಂಕು ಪತ್ತೆಯಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com