ಈಜಿಪ್ಟ್ ಗೂ ವ್ಯಾಪಿಸಿದ ಕೊರೋನಾ ವೈರಸ್ ಪ್ರಕರಣ

ವಿಶ್ವವನ್ನೆ  ಬೆಚ್ಚಿಬೀಳಿಸಿರುವ ಕರೋನ ಸೋಂಕು   ಈಜಿಪ್ಟ್‌ಗೂ  ವ್ಯಾಪಿಸಿದ್ದು, ಅಲ್ಲಿ  ಸೋಂಕಿನ  ಮೊದಲ ಪ್ರಕರಣ ದೃಡಪಟ್ಟಿದೆ ಎಂದು ಆರೋಗ್ಯ ಸಚಿವಾಲಯ  ಹೇಳಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಸಿರೋ:  ವಿಶ್ವವನ್ನೆ  ಬೆಚ್ಚಿಬೀಳಿಸಿರುವ ಕರೋನ ಸೋಂಕು   ಈಜಿಪ್ಟ್‌ಗೂ  ವ್ಯಾಪಿಸಿದ್ದು, ಅಲ್ಲಿ  ಸೋಂಕಿನ  ಮೊದಲ ಪ್ರಕರಣ ದೃಡಪಟ್ಟಿದೆ ಎಂದು ಆರೋಗ್ಯ ಸಚಿವಾಲಯ  ಹೇಳಿದೆ

ವಿದೇಶಿ ವ್ಯಕ್ತಿ ಗೆ  ಕರೋನವೈರಸ್  ಧನಾತ್ಮಕ ಪರೀಕ್ಷೆ ಮಾಡಿಸಲಾಗಿದೆ  ಪ್ರಕರಣವು ಸ್ಥಿರವಾಗಿದೆ   ಎಂದು ಆರೋಗ್ಯ ಸಚಿವಾಲಯದ ವಕ್ತಾರ ಖಲೀದ್ ಮುಜಾಹಿದ್  ತಿಳಿಸಿದ್ದಾರೆ.ಆದರೂ  ವಕ್ತಾರರು ಪ್ರಕರಣದ ರೋಗಿಯ ರಾಷ್ಟ್ರೀಯತೆಯನ್ನು ಗುರುತಿಸಿಲ್ಲ .

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗೆ ತಕ್ಷಣ ಮಾಹಿತಿ ನೀಡಲಾಗಿದ್ದು, ಡಬ್ಲ್ಯುಎಚ್‌ಒ ಸಹಕಾರದೊಂದಿಗೆ ಮುನ್ನಚ್ಚರಿಕೆ ಕ್ರಮವಾಗಿ  ಸೋಂಕು  ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ  ಮುಜಾಹಿದ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com