ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾರಕ ಕೊರೊನಾವೈರಸ್ ನಿಂದ ಚೀನಾದಲ್ಲಿ 2,000 ಸಮೀಪಿಸುತ್ತಿರುವ ಸಾವಿನ ಸಂಖ್ಯೆ

ಚೀನಾದಲ್ಲಿ ಮಾರಕ ಕರೋನವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಮಂಗಳವಾರ 1,868 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಬೀಜಿಂಗ್: ಚೀನಾದಲ್ಲಿ ಮಾರಕ ಕರೋನವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಮಂಗಳವಾರ 1,868 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ನಿನ್ನೆ ಹೊಸದಾಗಿ 98 ಹೊಸ ಸಾವುಗಳು ವರದಿಯಾಗಿದ್ದರೆ, 1,886 ಹೊಸ ಪ್ರಕರಣಗಳನ್ನು ವರದಿಯಾಗಿವೆ. ಈ ಪೈಕಿ 93 ಸಾವು ಮತ್ತು 1,807 ಸೋಂಕು ಪ್ರಕರಣಗಳು ವೈರಸ್ ನ ಕೇಂದ್ರ ಬಿಂದುವಾಗಿರುವ ಹುಬೈ ಪ್ರಾಂತ್ಯದಿಂದ ವರದಿಯಾಗಿವೆ.

ಕೊರೊನವೈರಸ್‌ನಿಂದ ಚೀನಾ ದೇಶಾದ್ಯಂತ ಸುಮಾರು 72,436 ಜನರು ಸೋಂಕಿಗೆ ಒಳಗಾಗಿದ್ದಾರೆ. ಮಂಗಳವಾರ 1,886 ಹೊಸ ಪ್ರಕರಣಗಳು ವರದಿಯಾಗಿವೆ. ಸೋಮವಾರದ ಸಂಖ್ಯೆಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆಯೆನಿಸಿದೆ.

ಈ ವೈರಸ್ ಪ್ರಕರಣ ಮೊದಲ ಬಾರಿಗೆ ಕಳೆದ ಡಿಸೆಂಬರ್‌ನಲ್ಲಿ ಹುಬೈ ಪ್ರಾಂತ್ಯದ ಹುವಾನ್ ನಲ್ಲಿ ವರದಿಯಾಗಿತ್ತು. ಸೋಂಕು ಉಲ್ಬಣದಿಂದ ಬೇರೆಡೆ ಸಂಚರಿಸದೆ ಇರುವುದರಿಂದ ಅನೇಕ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ವಾಣಿಜ್ಯ, ವ್ಯಾಪಾರ ವಹಿವಾಟು ಮತ್ತು ಪ್ರವಾಸೋದ್ಯಮದ ಮೇಲೆ ಮಾರಕ ಸೋಂಕು ಭಾರಿ ಪರಿಣಾಮ ಬೀರಿದೆ.

Related Stories

No stories found.

Advertisement

X
Kannada Prabha
www.kannadaprabha.com