ಅಮೆರಿಕ, ಆಸ್ಟ್ರೇಲಿಯಾ, ಥೈಲ್ಯಾಂಡ್ ಗಳಲ್ಲಿ ಮೊದಲ ಕೊರೊನಾ ವೈರಸ್ ಸಾವು:ಪ್ರಯಾಣ ನಿರ್ಬಂಧ ಹೇರಿಕೆ 

ಕೊರೊನಾ ವೈರಸ್ ಸೋಂಕಿಗೆ ಅಮೆರಿಕದಲ್ಲಿ ಮೊದಲ ವ್ಯಕ್ತಿ ಮೃತಪಟ್ಟಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್, ಇಟಲಿ ಮತ್ತು ದಕ್ಷಿಣಾ ಕೊರಿಯಾಕ್ಕೆ ಹೊಸ ಪ್ರಯಾಣ ನಿರ್ಬಂಧ ನಿಯಮ ಹೊರಡಿಸಿದ್ದಾರೆ. ಕೊರೊನಾ ವೈರಸ್ ಗೆ ಮೃತಪಟ್ಟ ವ್ಯಕ್ತಿ ವಾಷಿಂಗ್ಟನ್ ರಾಜ್ಯದಲ್ಲಿ ವರದಿಯಾಗಿದೆ. 
ಅಮೆರಿಕ, ಆಸ್ಟ್ರೇಲಿಯಾ, ಥೈಲ್ಯಾಂಡ್ ಗಳಲ್ಲಿ ಮೊದಲ ಕೊರೊನಾ ವೈರಸ್ ಸಾವು:ಪ್ರಯಾಣ ನಿರ್ಬಂಧ ಹೇರಿಕೆ 

ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿಗೆ ಅಮೆರಿಕದಲ್ಲಿ ಮೊದಲ ವ್ಯಕ್ತಿ ಮೃತಪಟ್ಟಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್, ಇಟಲಿ ಮತ್ತು ದಕ್ಷಿಣಾ ಕೊರಿಯಾಕ್ಕೆ ಹೊಸ ಪ್ರಯಾಣ ನಿರ್ಬಂಧ ನಿಯಮ ಹೊರಡಿಸಿದ್ದಾರೆ. ಕೊರೊನಾ ವೈರಸ್ ಗೆ ಮೃತಪಟ್ಟ ವ್ಯಕ್ತಿ ವಾಷಿಂಗ್ಟನ್ ರಾಜ್ಯದಲ್ಲಿ ವರದಿಯಾಗಿದೆ. 


ಅಮೆರಿಕಾದಲ್ಲಿ ಸದ್ಯ ಒಟ್ಟಾರೆ ಕೊರೊನಾ ವೈರಸ್ ಸೋಂಕಿನ ಪರಿಸ್ಥಿತಿ ಅಷ್ಟೊಂದು ತೀವ್ರವಾಗಿಲ್ಲ, ಆದರೆ ಭವಿಷ್ಯದ ಪರಿಸ್ಥಿತಿ ಹೇಳಲಾಗದು ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇಟಲಿ ಮತ್ತು ದಕ್ಷಿಣ ಕೊರಿಯಾ ದೇಶಗಳಿಗೆ ಸದ್ಯ ಪ್ರಯಾಣಿಸದಂತೆ ನಮ್ಮ ದೇಶದ ಪ್ರಜೆಗಳಿಗೆ ಸಹ ನಿರ್ಬಂಧ ವಿಧಿಸಿದ್ದೇವೆ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ನಿನ್ನೆ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.


ಕೊರೊನಾ ವೈರಸ್ ಸುಮಾರು 60 ದೇಶಗಳಿಗೆ ವ್ಯಾಪಿಸಿದ್ದು ಇದುವರೆಗೆ 29 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 85 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ತಗುಲಿದೆ. 


ಅಮೆರಿಕದಲ್ಲಿ ಸದ್ಯ 60ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ತಗುಲಿದ್ದು ಅವರಲ್ಲಿ ಬಹುತೇಕರು ಚೀನಾದ ವುಹಾನ್ ಪ್ರಾಂತ್ಯದಿಂದ ಸ್ಥಳಾಂತರಗೊಂಡವರು ಆಗಿದ್ದಾರೆ. 

ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಸಹ ಮೊದಲ ಕೊರೊನಾ ವೈರಸ್ ಸೋಂಕಿನಿಂದ ರೋಗಿಗಳು ಮೃತಪಟ್ಟ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com