ಕೊರೋನಾಗೆ ಇನ್ನು ಕೆಲವೇ ವಾರಗಳಲ್ಲಿ ಔಷಧಿ: ಇಡೀ ವಿಶ್ವಕ್ಕೆ ಸಿಹಿಸುದ್ದಿ ನೀಡಿದ ಇಸ್ರೇಲ್ ವಿಜ್ಞಾನಿಗಳು

ಮಾರಣಾಂತಿಕ ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಕಂಟಕವೆಂಬಂತೆ ಪರಿಣಮಿಸತೊಡಗಿದ್ದು, ಈ ನಡುವಲ್ಲೇ ಇಸ್ರೇಲಿನ ಸಂಶೋದಕರ ತಂಡವೊಂದು ಸಿಹಿಸುದ್ದಿಯೊಂದನ್ನು ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೆರುಸಲೇಂ: ಮಾರಣಾಂತಿಕ ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಕಂಟಕವೆಂಬಂತೆ ಪರಿಣಮಿಸತೊಡಗಿದ್ದು, ಈ ನಡುವಲ್ಲೇ ಇಸ್ರೇಲಿನ ಸಂಶೋದಕರ ತಂಡವೊಂದು ಸಿಹಿಸುದ್ದಿಯೊಂದನ್ನು ನೀಡಿದೆ. 

ಕೊರೋನಾ ಸೋಂಕು ತಡೆಯಬಲ್ಲ ಔಷಧಿಯನ್ನು ಇನ್ನು ಕೆಲವೇ ವಾರಗಳಲ್ಲಿ ಸಿದ್ಧವಾಗಲಿದ್ದು, ಬಳಕೆಗೆ ಲಭ್ಯವಾಗಲಿದೆ ಸಂಶೋಧಕರು ಹೇಳಿದ್ದಾರೆ.
 
ಮಿಗಾಲ್ (ಎಂಐಜಿಎಎಲ್) ಎಂದೇ ಖ್ಯಾತಿ ಪಡೆದಿರುವ ಗಲೀಲಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಹಕ್ಕಿಗಳ ಶ್ವಾಸನಾಳಗಳಲ್ಲಿ ಕಂಡು ಬರುವ ಕೊರೋನಾ ಮಾದರಿಯ ಐಬಿವಿ (ಇನ್ ಫೆಕ್ಟೀಯಸ್ ಬ್ರಾಂಕೈಟಿಸ್ ವೈರಸ್) ಸೋಂಕಿಗೆ ಔಷಧಿಯೊಂದನ್ನು ಕಂಡು ಹಿಡಿದಿದ್ದಾರೆ. 

ಬಳಕೆಪೂರ್ವ (ಪ್ರೀಕ್ಲೀನಿಕಲ್) ಪರೀಕ್ಷೆ ವೇಳೆ ಈ ಔಷಧಿ ಯಶಸ್ವಿಯಾಗಿದೆ. ಇದೇ ಔಷಧ ಕರೋನಾ ವೈರಸ್'ಗೆ ಯಶಸ್ವಿಯಾಗಿ ಬಳಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಔಷಧ ಇನ್ನು ಕೆಲವೇ ವಾರಗಳಲ್ಲಿ ಸಿದ್ಧವಾಗುವ ವಿಶ್ವಾಸವಿದೆ, ಜೊತೆಗೆ ರೋಗಿಗಳ ಬಳಕೆಗೆ ಲಭ್ಯವಾಗಬಹುದು ಎಂದು ಸಂಶೋಧಕರ ತಂಡ ತಿಳಿಸಿದೆ. 

ಈ ನಡುವೆ ಇಸ್ರೇಲ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಏಫಿರ್ ಅಕುನಿಸ್ ಅವರು, ಸಂಶೋಧಕ ತಂಡಕ್ಕೆ ಶುಭಾಶಯ ಕೋರಿರುವುದು, ಶೀಘ್ರವೇ ಲಸಿಕೆ ಲಭ್ಯವಾಗಬಹುದು ಎಂಬ ವಿಶ್ವಾಸಕ್ಕೆ ಕಾರಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com