ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಶ್ವದಲ್ಲೆಡೆ ಮುಂದುವರೆದ ಕೊರೋನಾ ಅಟ್ಟಹಾಸ: 990,738 ಮಂದಿ ಬಲಿಪಡೆದ ಮಹಾಮಾರಿ ವೈರಸ್

ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಎಂದಿನಂತೆ ಮುಂದುವರೆದಿದ್ದು, ಮಹಾಮಾರಿ ವೈರಸ್ ವಿವಿಧ ರಾಷ್ಟ್ರಗಳಲ್ಲಿ ಒಟ್ಟಾರೆ 990,738 ಜನರನ್ನು ಬಲಿಪಡೆದುಕೊಂಡಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ಹೇಳಿದೆ.

ನ್ಯೂಯಾರ್ಕ್: ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಎಂದಿನಂತೆ ಮುಂದುವರೆದಿದ್ದು, ಮಹಾಮಾರಿ ವೈರಸ್ ವಿವಿಧ ರಾಷ್ಟ್ರಗಳಲ್ಲಿ ಒಟ್ಟಾರೆ 990,738 ಜನರನ್ನು ಬಲಿಪಡೆದುಕೊಂಡಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ಹೇಳಿದೆ, 

ವಿಶ್ವದಾದ್ಯಂತ ಒಟ್ಟಾರೆ 990,738 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದರೆ, 3 ಕೋಟಿ 26 ಲಕ್ಷ ಜನರು ಸೋಂಕಿನಿಂದ ಬಳಲುತ್ತಿದ್ದಾರೆಂದು ವರದಿಯಲ್ಲಿ ತಿಳಿಸಿದೆ. 

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿದ್ದು, ಈ ವರೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 7,065,019ಕ್ಕೆ ಏರಿಕೆಯಾಗಿದ್ದು, 204,249 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಜಾಗತಿಕ ಸಾವಿನ ಪ್ರಮಾಣದಲ್ಲಿ ಶೇ.20 ರಷ್ಟು ಅಮೆರಿಕಾದ ಭಾಗವಾಗಿದೆ. 

ಇನ್ನು ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 1,40,537 ಮಂದಿ ಬಲಿಯಾಗಿದ್ದು, ಮೆಕ್ರಿಕೋ, ಬ್ರಿಟನ್, ಇಟಲಿ, ಪೆರು, ಫ್ರಾನ್ಸ್ ಹಾಗೂ ಸ್ಪೇನ್ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ 30,000 ಗಡಿ ದಾಟಿದೆ. 

Related Stories

No stories found.

Advertisement

X
Kannada Prabha
www.kannadaprabha.com