ಕೊರೋನಾಗೆ 2 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗುವ ಸಾಧ್ಯತೆ, ಕಠಿಣ ದಿನಗಳ ಎದುರಿಸಲು ಅಮೆರಿಕಾ ಸಜ್ಜಾಗಬೇಕಿದೆ: ಟ್ರಂಪ್

ಮಹಾಮಾರಿ ಕೊರೋನಾ ನಿಯಂತ್ರಿಸುವಲ್ಲಿ ಅಮೆರಿಕಾ ಕಂಗಾಲಾಗಿದ್ದು, ಮುಂದಿನ ಎರಡು ವಾರಗಳಲ್ಲಿ 2,40,000 ಜನರು ಮಾರಕ ವೈರಸ್'ಗೆ ಬಲಿಯಾಗಲಿದ್ದಾರೆಂದು ಹೇಳಲಾಗುತ್ತಿದೆ. 
ಟ್ರಂಪ್
ಟ್ರಂಪ್

ವಾಷಿಂಗ್ಟನ್: ಮಹಾಮಾರಿ ಕೊರೋನಾ ನಿಯಂತ್ರಿಸುವಲ್ಲಿ ಅಮೆರಿಕಾ ಕಂಗಾಲಾಗಿದ್ದು, ಮುಂದಿನ ಎರಡು ವಾರಗಳಲ್ಲಿ 2,40,000 ಜನರು ಮಾರಕ ವೈರಸ್'ಗೆ ಬಲಿಯಾಗಲಿದ್ದಾರೆಂದು ಹೇಳಲಾಗುತ್ತಿದೆ. 

ಈ ಕುರಿತ ವರದಿಯೊಂದನ್ನು ಟ್ರಂಪ್ ಸರ್ಕಾರ  ಬಿಡುಗಡೆ ಮಾಡಿದ್ದು, ವರದಿಯಲ್ಲಿ ಮುಂದಿನ ಎರಡು ವಾರಗಳಲ್ಲಿ ಸುಮಾರು 2,40,000 ಜನರು ವೈರಸ್'ಗೆ ಬಲಿಯಾಗಲಿದ್ದಾರೆಂದು ತಿಳಿಸಿದೆ. 

ಮುಂದಿನ ಎರಡು ವಾರಗಳಲ್ಲಿ ಸುಮಾರು 2,40,000 ಜನರು ಮಾರಕ ವೈರಸ್'ಗೆ ಬಲಿಯಾಗಲಿದ್ದು, ಅಮೆರಿಕಾ ತನ್ನ ಇತಿಹಾಸದಲ್ಲಿಯೇ ಅತ್ಯಂತ ದುಃಖದ ದಿನಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದೆ. 

ಇದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆ ಕೂಡ ಪುಷ್ಟಿ ನೀಡಿದೆ. ಮುಂದಿನ ಕಠಿಣ ಪರಿಸ್ಥಿತಿ ಎದುರಿಸಲು ಪ್ರತೀ ಅಮೆರಿಕನ್ನರೂ ಸಿದ್ಧರಾಗಿರಬೇಕೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com