ಅಮೆರಿಕ: 10 ಲಕ್ಷ ಜನರಿಗೆ ಕೊರೋನ ಸೋಂಕು ಪರೀಕ್ಷೆ, 1,75,000ಮಂದಿಗೆ ಸೋಂಕು, ಚೀನಾ ಮೀರಿಸಿದ ಸಾವಿನ ಸಂಖ್ಯೆ!

ಅಮೆರಿಕದಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಸಾವಿನ ಸಂಖ್ಯೆಯಲ್ಲಿ ಅಮೆರಿಕ ಇದೀಗ ಚೀನಾವನ್ನೂ ಹಿಂದಿಕ್ಕಿದೆ ಎಂದು ತಿಳಿದುಬಂದಿದೆ.
ಅಮೆರಿಕದಲ್ಲಿ ಕೊರೋನಾ ಹಾವಳೆ-ರಾಯಿಟರ್ಸ್ ಚಿತ್ರ
ಅಮೆರಿಕದಲ್ಲಿ ಕೊರೋನಾ ಹಾವಳೆ-ರಾಯಿಟರ್ಸ್ ಚಿತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಸಾವಿನ ಸಂಖ್ಯೆಯಲ್ಲಿ ಅಮೆರಿಕ ಇದೀಗ ಚೀನಾವನ್ನೂ ಹಿಂದಿಕ್ಕಿದೆ ಎಂದು ತಿಳಿದುಬಂದಿದೆ.

ಅಮೆರಿಕ ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈ ವರೆಗೂ 10 ಲಕ್ಷ ಜನರಿಗೆ ಕೊರೋನ ಸೋಂಕು ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 1,75,000ಮಂದಿಯಲ್ಲಿ ಸೋಂಕು ದಢಪಟ್ಟಿದೆ. ಅಂತೆಯೇ ಈ ವರೆಗೂ 3,415 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ  ಅಮೆರಿಕ ಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಮೀರಿಸಿದೆ. ಚೀನಾದಲ್ಲಿ ಈವರೆಗೂ 3,309 ಮಂದಿ ಸಾವನ್ನಪ್ಪಿದ್ದರು ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ಇತ್ತೀಚಿನ ಮಾಹಿತಿ ಹೇಳಿದೆ.

10 ಲಕ್ಷ ಜನರಿಗೆ ಕೊರೋನ ಸೋಂಕು ಪರೀಕ್ಷೆ: ಅಮೆರಿಕ ಅಧ್ಯಕ್ಷ ಟ್ರಂಪ್
ಇದೇ ವೇಳೆ ಅಮೆರಿಕದಲ್ಲಿ 10 ಲಕ್ಷ ಜನರಿಗೆ ಕರೋನ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಹೇಳಿದ್ದಾರೆ. ಕೊರೋನಾ ವೈರಸ್ ಕುರಿತು ಮಾತನಾಡಿದ ಅವರು, 'ಇಂದು ನಾವು ಕೊರೋನ ಹಾವಳಿ ವಿರುದ್ಧದ ಯುದ್ಧದಲ್ಲಿ ಒಂದು ಐತಿಹಾಸಿಕ  ಮೈಲಿಗಲ್ಲನ್ನು ತಲುಪಿದ್ದೇವೆ. 1 ಮಿಲಿಯನ್ ಅಮೆರಿಕನ್ನರನ್ನು ಪರೀಕ್ಷಿಸಲಾಗಿದೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅಂತೆಯೇ 'ಈ ನಡುವೆ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಸೋಂಕುನಿವಾರಕಗೊಳಿಸುವ ಎನ್ 95 ಮಾಸ್ಕ್ ಗಳನ್ನು  ಅನುಮೋದಿಸಿದ್ದು ಆರೋಗ್ಯ ಕಾರ್ಯಕರ್ತರು ಅವುಗಳನ್ನು ಮರುಬಳಕೆ ಮಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com