ಆಗಸದಲ್ಲಿ ಏಲಿಯನ್?; UFO ಹಾರಾಟದ ಅಸಲಿ ವಿಡಿಯೋ ಬಿಡುಗಡೆ ಮಾಡಿದ ಪೆಂಟಗನ್!

ಏಲಿಯನ್ ಅಸ್ಥಿತ್ವದ ಕುರಿತು ಸಂಶೋಧನೆಗಳು ಮುಂದುವರೆದಿರುವಂತೆಯೇ ಇತ್ತ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ UFO (ಹಾರುವ ತಟ್ಟೆ ಅಥವಾ ಗುರುತು ಪತ್ತೆಯಾಗದ ವಸ್ತು) ಹಾರಾಟದ ಅಸಲಿ ವಿಡಿಯೋ ಬಿಡುಗಡೆ ಮಾಡಿದೆ ಎನ್ನಲಾಗಿದೆ.
ಅಮೆರಿಕ ಸೇನೆ ಬಿಡುಗಡೆ ಮಾಡಿದ ವಿಡಿಯೋ (ಚಿತ್ರಕೃಪೆ: ಗಾರ್ಡಿಯನ್)
ಅಮೆರಿಕ ಸೇನೆ ಬಿಡುಗಡೆ ಮಾಡಿದ ವಿಡಿಯೋ (ಚಿತ್ರಕೃಪೆ: ಗಾರ್ಡಿಯನ್)

ವಾಷಿಂಗ್ಟನ್: ಏಲಿಯನ್ ಅಸ್ಥಿತ್ವದ ಕುರಿತು ಸಂಶೋಧನೆಗಳು ಮುಂದುವರೆದಿರುವಂತೆಯೇ ಇತ್ತ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ UFO (ಹಾರುವ ತಟ್ಟೆ ಅಥವಾ ಗುರುತು ಪತ್ತೆಯಾಗದ ವಸ್ತು) ಹಾರಾಟದ ಅಸಲಿ ವಿಡಿಯೋ ಬಿಡುಗಡೆ ಮಾಡಿದೆ ಎನ್ನಲಾಗಿದೆ.

ಹೌದು.. ಸೋಮವಾರ ಪೆಂಟಗನ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ಏಲಿಯನ್ ಗಳ ನೌಕೆ ಎನ್ನಲಾದ UFO ಹಾರಾಟದ ದೃಶ್ಯಗಳಿವೆ ಎನ್ನಲಾಗಿದೆ. ಅಲ್ಲದೆ ಅಮೆರಿಕ ವಾಯುಸೇನೆ ಈ ವಿಡಿಯೋವನ್ನು ಸ್ವತಃ ತಾನೇ ಸೆರೆ ಹಿಡಿದಿರುವುದಾಗಿ ಘೋಷಣೆ  ಮಾಡಿದೆ. 

ಮೂಲಗಳ ಪ್ರಕಾರ ಗುರುತು ಪತ್ತೆಯಾಗದ ವಸ್ತು (UFO)ವೊಂದು ಆಕಾಶದಲ್ಲಿ ಅತಿ ವೇಗವಾಗಿ ಹಾರಾಡುತ್ತಿರುವ ಮೂರು ದೃಶ್ಯಗಳು 2007ರಿಂದ 2017ರ ಅವಧಿಯಲ್ಲಿ ವಾಯುಸೇನೆಯಿಂದ ಸೋರಿಕೆಯಾಗಿದ್ದು, ಜಗತ್ತಿನಾದ್ಯಂತ ವೈರಲ್‌ ಆಗಿತ್ತು. ಆದರೆ, ಈ ವಿಡಿಯೊ ಕುರಿತು  ಅನುಮಾನಗಳು, ನಿರಾಕರಣೆಗಳೂ ಕೇಳಿ ಬಂದಿದ್ದವು. ಹೀಗಿರುವಾಗಲೇ ಅಮೆರಿಕ ವಾಯು ಸೇನೆ ಇದು ತಾನೇ ಸೆರೆ ಹಿಡಿದ ವಿಡಿಯೋ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ದೃಶ್ಯದಲ್ಲಿ ಸೆರೆಯಾಗಿರುವ ವಸ್ತು ಏನೆಂದು ಪತ್ತೆ ಮಾಡಲು ನಮಗೆ ಸಾಧ್ಯವಾಗಿಲ್ಲ ಎಂದು ಅದು ಹೇಳಿದೆ. ಆ ಮೂಲಕ  ಏಲಿಯನ್ ಗಳ ಅಸ್ಥಿತ್ವದ ಕುರಿತು ಮತ್ತೆ ಚರ್ಚೆ ಹುಟ್ಟುಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com