ಅಮೆರಿಕ: ಜಾಗಿಂಗ್ ಮಾಡುತ್ತಿದ್ದ ವೇಳೆ ಭಾರತೀಯ ಮೂಲದ ಮಹಿಳಾ ಸಂಶೋಧಕಿಯ ಕೊಲೆ

ಜಾಗಿಂಗ್ ಮಾಡುತ್ತಿದ್ದ 43 ವರ್ಷದ ಭಾರತೀಯ ಮೂಲದ ಮಹಿಳಾ ಸಂಶೋಧಕಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಈ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೌಸ್ಟನ್:  ಜಾಗಿಂಗ್ ಮಾಡುತ್ತಿದ್ದ 43 ವರ್ಷದ ಭಾರತೀಯ ಮೂಲದ ಮಹಿಳಾ ಸಂಶೋಧಕಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಈ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಟೆಕ್ಸಾಸ್ ರಾಜ್ಯದ ಪ್ಲಾನೊ ನಗರದ  ಸರ್ಮಿಸ್ತಾ ಸೇನ್ , ಚಿಶೋಲ್ಮ್ ಟ್ರಯಲ್ ಪಾರ್ಕ್ ನಲ್ಲಿ ಆಗಸ್ಟ್ 1 ರಂದು ಜಾಗಿಂಗ್ ಮಾಡುತ್ತಿರುವಾಗ ತೀವ್ರ ರೀತಿಯ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಲಿಗೇಸಿ ಡ್ರೈವ್ ಬಳಿಯ ಕಾಲುವೆಯೊಂದರ ಬಳಿ ಬಿದಿದ್ದ ಮೃತದೇಹವನ್ನು ದಾರಿಹೋಕರು ಪತ್ತೆ ಹಚ್ಚಿದ್ದಾರೆ ಎಂದು ಡಬ್ಲ್ಯೂಎಫ್ ಎಎ. ಕಾಮ್ ವರದಿ ಮಾಡಿದೆ.

ಸೇನ್ ಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಫಾರ್ಮಸಿಸ್ಟ್ ಮತ್ತು ಸಂಶೋಧಕರಾಗಿ ಕೆಲಸ ಮಾಡುತ್ತಿರುವುದಾಗಿ ಪಾಕ್ಸ್ 4 ನ್ಯೂಸ್ ವರದಿ ಮಾಡಿದೆ. ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮತ್ತೊಂದು ವೆಬ್ ಸೈಟ್   ತಿಳಿಸಿದೆ.

ಹತ್ಯೆ ಸಂದರ್ಭದಲ್ಲಿ ಮೈಕೇಲ್ ಡ್ರೈವ್ ನ 3400 ಬ್ಲಾಕ್ ನಲ್ಲಿ ಕೆಲವರು ಮನೆ ಮುರಿದಿರುವುದು  ಕಂಡುಬಂದಿದೆ ಎಂದು ಪೊಲೀಸರು ಹೇಳಿರುವುದಾಗಿ ಪಾಕ್ಸ್ 4 ನ್ಯೂಸ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com