ಭಾರತೀಯರಿಗೆ ಶಾಕ್ ಕೊಟ್ಟ ಅಮೆರಿಕಾ; ಎಚ್1ಬಿ ವೀಸಾದಾರರಿಗೆ 'ಫೆಡರಲ್ ಕೆಲಸ' ನಿರ್ಬಂಧಿಸಿದ ಟ್ರಂಪ್ ಸರ್ಕಾರ

ಭಾರತ ಮೂಲದ ಕೆಲಗಾರರಿಗೆ ವರದಾನವಾಗಿದ್ದ ಎಚ್1ಬಿ ವೀಸಾ ನಿಯಮಾವಳಿಗೆ ಬದಲಾವಣೆ ತಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಚ್1ಬಿ ವೀಸಾದಾರರಿಗೆ ಕೆಲಸ ನಿರ್ಬಂಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ.

Published: 04th August 2020 02:03 PM  |   Last Updated: 04th August 2020 02:39 PM   |  A+A-


Donald trump

ಡೊನಾಲ್ಡ್ ಟ್ರಂಪ್

Posted By : Srinivasamurthy VN
Source : PTI

ವಾಷಿಂಗ್ಟನ್: ಭಾರತ ಮೂಲದ ಕೆಲಗಾರರಿಗೆ ವರದಾನವಾಗಿದ್ದ ಎಚ್1ಬಿ ವೀಸಾ ನಿಯಮಾವಳಿಗೆ ಬದಲಾವಣೆ ತಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಚ್1ಬಿ ವೀಸಾದಾರರಿಗೆ ಕೆಲಸ ನಿರ್ಬಂಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ.

ಆ ಮೂಲಕ ಕೋಟ್ಯಂತರ ಭಾರತೀಯರ ಅಮೆರಿಕ ಕೆಲಸದ ಆಸೆಗೆ ಟ್ರಂಪ್ ಸರ್ಕಾರ ತಣ್ಣೀರೆರಚಿದೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಪ್ರಕಟಿಸಿದ್ದು. ಎಚ್ 1ಬಿ ವೀಸಾ ಹೊಂದಿರುವವರನ್ನು ನೇಮಕ ಮಾಡಿಕೊಳ್ಳದಂತೆ ಏಜೆನ್ಸಿಗಳಿಗೆ ಸೂಚಿಸಿದ್ದಾರೆ.

ಹೀಗಾಗಿ, ಸರ್ಕಾರದ ವ್ಯಾಪ್ತಿಯ ಎಲ್ಲಾ ಇಲಾಖೆಗಳಲ್ಲಿ ಕೌಶಲ್ಯ ಆಧಾರಿತ ಹುದ್ದೆಗಳಿಗೆ ಮೂಲ ಅಮೆರಿಕನ್ನರನ್ನು ನೇಮಿಸಲಾಗುತ್ತದೆ. ಎಚ್1ಬಿ ವೀಸಾ ಹೊಂದಿದವರಿಗೆ ಈ ಹುದ್ದೆಗಳು ಸಿಗುವುದಿಲ್ಲ. ಫೆಡರಲ್ ಸೇವೆಯಲ್ಲಿ H1-B ವೀಸಾ ಹೊಂದಿರುವವರ ನೇಮಕವನ್ನು ತಮ್ಮ ಸರ್ಕಾರ ನಿಷೇಧಿಸಿದೆ. ಈ ಇಲಾಖೆಗಳಿಗೆ ತಾಂತ್ರಿಕ ನೆರವು ಒದಗಿಸುತ್ತಿದ್ದ ಭಾರತ ಮೂಲದ ಐಟಿ ಸಂಸ್ಥೆಗಳಿಗೂ ಇದರಿಂದ ಭಾರಿ ಹೊಡೆತ ಬೀಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಅಮೆರಿಕನ್ನರಿಗೆ ನೆರವಾಗುವ ದೃಷ್ಟಿಯಿಂದ ಮತ್ತು ಅಮೆರಿಕದಲ್ಲಿ ಅಮೆರಿಕನ್ನರಿಗೇ ಮೊದಲ ಆದ್ಯತೆ ಎಂಬ ಧ್ಯೇಯದೊಂದಿಗೆ ತಾವು ಈ ಕಾನೂನಿಗೆ ಸಹಿ ಮಾಡಿದ್ದೇನೆ. ಈ ಹಿಂದೆ ತಮ್ಮ ಸರ್ಕಾರ ಘೋಷಣೆ ಮಾಡಿದಂತೆ ಹೆಚ್ 1ಬಿ ವೀಸಾ ನಿಯಮಾವಳಿಗಳಲ್ಲಿ ಬದಲಾವಣೆ ತಂದಿದ್ದು, ಮತ್ತೆ ಅಮೆರಿಕ್ನರಿಗೆ ಅವಕಾಶ ನೀಡುವ ಸಲುವಾಗಿ ತಾವು ಎಚ್1ಬಿ ವೀಸಾದಾರರಿಗೆ ಕೆಲಸ ನಿರ್ಬಂಧಿಸುವ ಆದೇಶಕ್ಕೆ ಸಹಿ ಹಾಕಿದ್ದೇವೆ. ಕಡಿಮೆ ಸಂಬಂಳ ಪಡೆಯುವ ಅಮೆರಿಕನ್ ಕೆಲಸಗಾರರ ರಕ್ಷಣೆಗಾಗಿ ಹೆಚ್ಚು ಸಂಭಾವನೆ ಪಡೆಯುವ ಪ್ರತಿಭೆಗಳಿಗೆ ಮಾತ್ರ ಎಚ್ -1 ಬಿ ವೀಸಾವೃನ್ನು ಬಳಸಬೇಕು ಎಂಬ ಆದೇಶ ತಂದಿದ್ದೇನೆ. ಇದರಿಂದ ಅಮೆರಿಕದಲ್ಲಿ ಸಣ್ಣ ಪುಟ್ಟ ಪ್ರಮುಖ ಹುದ್ದೆಗಳು ವಿದೇಶಗರ ಪಾಲಾಗವುದು ತಪ್ಪುತ್ತದೆ ಎಂದು  ಹೇಳಿದ್ದಾರೆ. 

'ನಾನು ಇಂದು ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶ ಎಂದರೆ ಅಮೆರಿಕದ ನಾಗರಿಕರಿಗೆ ಮಾತ್ರ ಯುಎಸ್ ಸರ್ಕಾರಿ ಉದ್ಯೋಗಗಳಲ್ಲಿ ಉದ್ಯೋಗ ಸಿಗುತ್ತದೆ. ನಾವು ಕೊಟ್ಟ ಮಾತಿನಂತೆ ಎಚ್ 1- ಬಿ (H1-B) ವೀಸಾ ನೀತಿಯನ್ನು ಬದಲಾಯಿಸಿದ್ದೇವೆ. ಇದರಿಂದ ವಲಸೆ ಕಾರ್ಮಿಕರನ್ನು ಅಮೆರಿಕದ ಪ್ರಜೆಯಿಂದ ಬದಲಾಯಿಸಲಾಗುವುದಿಲ್ಲ. ಎಚ್ 1-ಬಿ ವೀಸಾಗಳು ಉನ್ನತ ಮಟ್ಟದ ವೃತ್ತಿಪರರಿಗಾಗಿರಬೇಕು, ಇದರಿಂದಾಗಿ ಅವರು ಅಮೆರಿಕಾದ ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತಾರೆ, ಅಗ್ಗದ ದುಡಿಮೆಗೆ ಬದಲಾಗಿ ನಿರುದ್ಯೋಗಿ ಅಮೆರಿಕನ್ ನಾಗರಿಕರಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಇನ್ನು ಅಮೆರಿಕ ಸರ್ಕಾರದ ನಿರ್ಧಾರದಿಂದಾಗಿ ಭಾರತೀಯ ಐಟಿ ವೃತ್ತಿಪರರಿಗೆ ದೊಡ್ಡ ಹಿನ್ನಡೆಯೆಂದು ಪರಿಗಣಿಸಲಾಗುತ್ತಿದೆ. ಈ ಮೊದಲು ಜೂನ್ 23 ರಂದು ಡೊನಾಲ್ಡ್ ಟ್ರಂಪ್ ಎಚ್ 1-ಬಿ ವೀಸಾಗಳನ್ನು ನೀಡುವುದನ್ನು ನಿಷೇಧಿಸಿದ್ದರು. ಇದರೊಂದಿಗೆ ಇತರ ವಿದೇಶಿ ಪ್ರಜೆಗಳಿಗೆ ಕೆಲಸದ ಪರವಾನಗಿ ನೀಡುವುದನ್ನು ನಿಷೇಧಿಸಿದರು. ಕೋವಿಡ್ -19 ಅಂದರೆ ಕೊರೋನಾದ ಕಾರಣದಿಂದಾಗಿ ಹೋಗುತ್ತಿರುವ ಅಮೆರಿಕನ್ ನಾಗರಿಕರ ಉದ್ಯೋಗವನ್ನು ಉಳಿಸುವುದೇ ಇದರ ಹಿಂದಿನ ಕಾರಣ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ. ಈ ನಿಷೇಧವು ಜೂನ್ 24 ರಿಂದಲೇ ಜಾರಿಯಾಗಿದೆ.

ಅಮೆರಿಕದ ಸರ್ಕಾರಿ ಉದ್ಯೋಗಗಳಲ್ಲಿ ಅಮೆರಿಕದ ನಾಗರಿಕರಿಗೆ ಆದ್ಯತೆ ನೀಡುವ ಡೊನಾಲ್ಡ್ ಟ್ರಂಪ್  ಈ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದಾರೆ. ಎಚ್ 1-ಬಿ ವೀಸಾವನ್ನು ಭಾರತೀಯ ಐಟಿ ವೃತ್ತಿಪರರ ಮೊದಲ ಆಯ್ಕೆಯೆಂದು ಪರಿಗಣಿಸಲಾಗಿದೆ, ಏಕೆಂದರೆ ಅದು ಅವರಿಗೆ ಅಮೆರಿಕನ್ ಕಂಪನಿಗಳಲ್ಲಿ ಕೆಲಸ ಮಾಡಲು ಅವಕಾಶಗಳನ್ನು ನೀಡುತ್ತದೆ.

ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಎಚ್-1ಬಿ ವೀಸಾ ಸಂಖ್ಯೆಗಳ ಮೇಲೆ ನಿಯಂತ್ರಣ ಹೇರಿದ್ದರು. ವೀಸಾ ನೀತಿಯ ದೆಸೆಯಿಂದ ಸುಮಾರು 150 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಐಟಿ ಕ್ಷೇತ್ರ ಆತಂಕದಲ್ಲಿತ್ತು. ಆದರೆ, ನಂತರ ನಿಯಮ ಸಡಿಲಿಕೆಯಾಗಿತ್ತು. ಆದರೆ, ಈಗ ವೀಸಾದಾರರಿಗೆ ಅಮೆರಿಕದ ಸರ್ಕಾರಿ ಉದ್ಯೋಗ ಲಭ್ಯವಿಲ್ಲ ಎಂಬ ಆದೇಶವು ಭಾರತ ಮೂಲದ ತಂತ್ರಜ್ಞರಿಗೆ ಮುಳುವಾಗಲಿದೆ. ಅಮೆರಿಕದ H-1B ವೀಸಾ ಪಡೆಯುವವರಲ್ಲಿ ಶೇ 70 ರಷ್ಟು ಭಾರತೀಯರೇ ಇದ್ದು, ಪ್ರತಿ ವರ್ಷ ಭಾರತದಿಂದ ಸುಮಾರು 80 ಸಾವಿರಕ್ಕೂ ಹೆಚ್ಚು ಜನ ಅಮೆರಿಕಕ್ಕೆ ತೆರಳುತ್ತಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp