ಕೊರೋನಾ ಸೋಂಕು : ಚೀನಾದಲ್ಲಿ ಮೃತರ ಸಂಖ್ಯೆ 811 ಕ್ಕೆ ಏರಿಕೆ, 'ಸಾರ್ಸ್' ಅನ್ನೂ ಹಿಂದಿಕ್ಕಿದ 'ಮಹಾಮಾರಿ'

ಚೀನಾದಲ್ಲಿನ ಕೊರೋನಾ ಸೋಂಕಿನಿಂದ ಮೃತರ ಸಂಖ್ಯೆ ಈಗ 811 ಕ್ಕೆ ಏರಿದ್ದು 6,188 ಮಂದಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದು, ಒಟ್ಟಾರೆ ಅಲ್ಲಿ ಮರಣ ಮೃದಂಗ ಮುಂದುವರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೋ: ಚೀನಾದಲ್ಲಿನ ಕೊರೋನಾ ಸೋಂಕಿನಿಂದ ಮೃತರ ಸಂಖ್ಯೆ ಈಗ 811 ಕ್ಕೆ ಏರಿದ್ದು 6,188 ಮಂದಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದು, ಒಟ್ಟಾರೆ ಅಲ್ಲಿ ಮರಣ ಮೃದಂಗ ಮುಂದುವರೆದಿದೆ.

ಇದುವರೆಗೆ 2,640 ಕ್ಕೂ ಹೆಚ್ಚು ಜನರು ಚಿಕಿತ್ಸೆಯಿಂದ ಚೇತರಿಸಿಕೊಂಡು, ಮನೆಗೆ ಹಿಂತಿರುಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೈರಸ್​ ಹೆಚ್ಚಾಗಿ ಹರಡಿರುವ ಹುಬೇ ಪ್ರಾಂತ್ಯದಲ್ಲಿ 81 ಹೊಸ ಸಾವಿನ ಪ್ರಕರಣಗಳು ದಾಖಲಾಗುವ ಮೂಲಕ ಭಾನುವಾರದ ಆರಂಭದ ಹೊತ್ತಿಗೆ ಒಟ್ಟು ಮೃತರ ಸಂಖ್ಯೆ 811ಕ್ಕೆ ಏರಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ.

ಈ ಹಿಂದೆ ತೀವ್ರ ಉಸಿರಾಟದ ತೊಂದರೆಯ ಸಾರ್ಸ್​(ಸಿವಿಯರ್​ ಅಕ್ಯೂಟ್​ ರೆಸ್ಪಿರೇಟರಿ ಸಿಂಡ್ರೋಮ್) ವೈರಸ್​ ಸೋಂಕಿನಿಂದ ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಸಾವಿನ ಸಂಖ್ಯೆಯನ್ನೂ ಕೊರೋನಾ ವೈರಸ್​ ಮೀರಿಸಿದೆ. 2002-2003ರಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್​ನಿಂದ 774 ಮಂದಿ ಸಾವಿಗೀಡಾಗಿದ್ದರು. ಇದೀಗ ಕೊರೋನಾ ದಾಳಿಯಿಂದ 811 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹುಬೇನಲ್ಲಿ 2,147 ಹೊಸ ಕೊರೋನಾ ವೈರಸ್​ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಎಂದು ಹುಬೇ ಆರೋಗ್ಯ ಸಚಿವಾಲಯವು ಹೇಳಿದೆ. ಕಳೆದ ಡಿಸೆಂಬರ್​​ನಲ್ಲಿ ಕೊರೋನಾ ವೈರಸ್​ ಹರಡಲು ಆರಂಭಿಸಿತ್ತು. ಸದ್ಯ ಚೀನಾದ್ಯಂತ 36,690ಕ್ಕೂ ಹೆಚ್ಚು ಸೋಂಕು ತಗುಲಿರುವ ಪ್ರಕರಣಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com