ಸೇನಾಧಿಕಾರಿ ಸೊಲೈಮನಿ ಹತ್ಯೆ: ಅಮೆರಿಕಾ ವಿರುದ್ಧ ಪ್ರತೀಕಾರದ ಬೆದರಿಕೆ ಹಾಕಿದ ಇರಾನ್

ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ಇರಾನ್ ಸೇನಾಧಿಕಾರಿ ಖಾಸಿಂ ಸೊಲೈಮನಿಯವರನ್ನು ಅಮೆರಿಕಾ ಸೇನೆ ಹತ್ಯೆ ಮಾಡಿರುವುದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಇರಾನ್, ಇದೀಗ ಅಮೆರಿಕಾ ವಿರುದ್ಧ ಪ್ರತೀಕಾರದ ಬೆದರಿಕೆ ನೀಡಿದೆ. 
ಸೇನಾಧಿಕಾರಿ ಸೊಲೈಮನಿ ಹತ್ಯೆ: ಅಮೆರಿಕಾಗೆ ಪ್ರತೀಕಾರ ಬೆದರಿಕೆ ಹಾಕಿದ ಇರಾನ್
ಸೇನಾಧಿಕಾರಿ ಸೊಲೈಮನಿ ಹತ್ಯೆ: ಅಮೆರಿಕಾಗೆ ಪ್ರತೀಕಾರ ಬೆದರಿಕೆ ಹಾಕಿದ ಇರಾನ್

ಟೆಹರಾನ್: ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ಇರಾನ್ ಸೇನಾಧಿಕಾರಿ ಖಾಸಿಂ ಸೊಲೈಮನಿಯವರನ್ನು ಅಮೆರಿಕಾ ಸೇನೆ ಹತ್ಯೆ ಮಾಡಿರುವುದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಇರಾನ್, ಇದೀಗ ಅಮೆರಿಕಾ ವಿರುದ್ಧ ಪ್ರತೀಕಾರದ ಬೆದರಿಕೆ ನೀಡಿದೆ. 

ಹಲವು ವರ್ಷಗಳಿಂಗ ಅಮೆರಿಕಾ ಹಾಗೂ ಇರಾನ್ ನಡುವೆ ಸಂಘರ್ಷ ಮುಂದುವರೆದಿದ್ದು, ಇರಾನ್ ಸೇನಾಧಿಕಾರಿ ಹತ್ಯೆ ಬಳಿಕ ಈ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಇದೀಗ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. 

ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ಮೇರೆಗೆ ದಾಳಿ ಹಾಗೂ ಹತ್ಯೆ ನಡೆಯಲಾಗಿತ್ತು ಎಂದು ಅಮೆರಿಕಾ ಸೇನೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಇದು ಇರಾನ್ ಕೋಪ ನೆತ್ತಿಗೇರುವಂತೆ ಮಾಡಿದೆ. 

ತನ್ನ ಸೇನಾಧಿಕಾರಿಯನ್ನು ಹತ್ಯೆಗೈದ ಅಮೆರಿಕ ಮೇಲೆ ತೀವ್ರ ಆಕ್ರೋಷ ವ್ಯಕ್ತಪಡಿಸಿರುವ ಇರಾನ್, ಸೊಲೈಮನಿ ಹತ್ಯೆ ಅತ್ಯಂತ ಅಪಾಯಕಾರಿ ಹಾಗೂ ಮೂರ್ಖತನದ ಕೃತ್ಯ. ಮುಂದಿನ ಎಲ್ಲಾ ಪರಿಣಾಮಗಳಿಗೂ ಅಮರಿಕಾ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com