ಇರಾನ್ ರಾಷ್ಟ್ರ ಮುಂದೆಂದೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ: ಡೊನಾಲ್ಡ್ ಟ್ರಂಪ್

ಇರಾನ್ ಹಾಗೂ ಅಮೆರಿಕ ನಡುವಿನ ವೈರತ್ವ ದಿನದಿಂದ ದಿನಕ್ಕೆ ತಾರಕ್ಕೇರಿದ್ದು, ಅಮೆರಿಕಾ ವಿರುದ್ಧ ಪ್ರತಿದಾಳಿ ಮಾಡಲು ಹವಣಿಸುತ್ತಿರುವ ಇರಾನ್ ರಾಷ್ಟ್ರದ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಇರಾನ್ ಹಾಗೂ ಅಮೆರಿಕ ನಡುವಿನ ವೈರತ್ವ ದಿನದಿಂದ ದಿನಕ್ಕೆ ತಾರಕ್ಕೇರಿದ್ದು, ಅಮೆರಿಕಾ ವಿರುದ್ಧ ಪ್ರತಿದಾಳಿ ಮಾಡಲು ಹವಣಿಸುತ್ತಿರುವ ಇರಾನ್ ರಾಷ್ಟ್ರದ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 

ಸಾಮಾಜಿದ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಟ್ರಂಪ್ ಅವರು, ಇರಾನ್ ರಾಷ್ಟ್ರ ಮುಂದೆಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ. ಪರಮಾಣು ಶಸ್ತ್ರಾಸ್ತ್ರ ಹೊಂದಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ. 

ಇರಾನ್ ಉನ್ನತ ಸೇನಾಧಿಕಾರಿ ಖಾಸಿಂ ಸುಲೈಮಾನಿಯನ್ನು ಅಮೆರಿಕಾ ವಾಯುದಾಳಿಯಲ್ಲಿ ಹತ್ಯೆಗೈದ ಬಳಿಕ ಉಂಟಾಗಿರುವ ತ್ವೇಷಮಯ ಪರಿಸ್ಥಿತಿ, ಭಾರತ ಸೇರಿದಂತೆ ವಿಶ್ವದ ಅರ್ಥ ವ್ಯವಸ್ಥೆ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರು ಟ್ವೀಟ್ ಮಾಡಿ ಇರಾನ್ ರಾಷ್ಟ್ರದ ವಿರುದ್ಧ ಕಿಡಿಕಾರಿದ್ದಾರೆ. ]

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com