ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ರೇಲ್ ಮೇಲೆ ದಂಡೆತ್ತಿದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ: ಇರಾನ್ ಗೆ ನೆತಾನ್ಯಹು ಎಚ್ಚರಿಕೆ

ಇರಾನ್ ಮತ್ತು ಅಮೆರಿಕ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಅಮೆರಿಕ ಬೆಂಬಲಕ್ಕೆ ನಿಂತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು, ಇಸ್ರೇಲ್ ಮೇಲೆ ದಂಡೆತ್ತಿದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ ಎಂದು ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.

ಟೆಲ್ ಅವೀವ್: ಇರಾನ್ ಮತ್ತು ಅಮೆರಿಕ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಅಮೆರಿಕ ಬೆಂಬಲಕ್ಕೆ ನಿಂತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು, ಇಸ್ರೇಲ್ ಮೇಲೆ ದಂಡೆತ್ತಿದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ ಎಂದು ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.

ಅತ್ತ ಅಮೆರಿಕ ಇರಾನ್ ಸೇನಾ ಕಮಾಂಡರ್ ಸೊಲೈಮಾನಿ ಹತ್ಯೆಗೈದ ಬೆನ್ನಲ್ಲೇ ಇತ್ತ ಇರಾನ್ ಸೇನೆ ಇರಾಕ್ ನಲ್ಲಿನ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಇದರ ಬೆನ್ನಲ್ಲೇ ಅಮೆರಿಕ ಮಿತ್ರ ರಾಷ್ಟ್ರ ಇಸ್ರೇಲ್ ಮೇಲೂ ಇರಾನ್ ದಾಳಿ ಮಾಡಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದೇ ವಿಚಾರವಾಗಿ ಇರಾನ್ ವಿರುದ್ಧ ಕಿಡಿಕಾರಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರು, ಇಸ್ರೇಲ್ ಮೇಲೆ ದಂಡೆತ್ತಿದರೆ ಕಂಡುಕೇಳರಿಯದ ಹೊಡೆತ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಜೆರುಸಲೇಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನೆತಾನ್ಯಹು, ಯಾವುದೇ ದೇಶವಾಗಲಿ.. ನಾವು ಪ್ರಾದೇಶಿಕ ಶಾಂತಿ ಬಯಸುತ್ತೇವೆ. ಆದರೆ ಯಾವುದೇ ದೇಶ ಇಸ್ರೇಲ್ ಮೇಲೆ ದಾಳಿ ಮಾಡುವ ದುಸ್ಸಾಹಸಕ್ಕೆ ಕೈಹಾಕಿದರೆ, ಇತಿಹಾಸ ಎಂದೆಂದೂ ಮರೆಯದ ಹೊಡೆತವನ್ನು ನಾವು ಅವರಿಗೆ ನೀಡುತ್ತೇವೆ ಎಂದು ಹೇಳಿದರು. ಅಂತೆಯೇ ಕಳೆದ ವಾರ ಅಮೆರಿಕ ದಾಳಿಯಲ್ಲಿ ಮೃತರಾದ ಇರಾನ್ ಸೇನಾ ಕಮಾಂಡರ್ ಖಾಸಿಮ್ ಸೊಲೈಮಾನಿ ಅವರನ್ನು 'ಭಯೋತ್ಪಾದಕರ ಮುಖ್ಯಸ್ಥ' ಎಂದು ಕರೆಯುವ ಮೂಲಕ ನೆತಾನ್ಯಹು ಸೊಲೈಮಾನಿ ಹತ್ಯೆ ಮಾಡಿದ ಅಮೆರಿಕ ನಡೆಗೆ ಬೆಂಬಲ ಸೂಚಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com