ಉಕ್ರೇನ್ ವಿಮಾನವನ್ನು ನಾವೇ ಉರುಳಿಸಿದ್ದು, ಆದರೆ ಉದ್ದೇಶಪೂರ್ವಕವಲ್ಲ- ಇರಾನ್ ತಪ್ಪೊಪ್ಪಿಗೆ

ವಿಶ್ವದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಇರಾನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತಪ್ಪು ಗ್ರಹಿಕೆಯಿಂದಾಗಿ ವಿಮಾನ ಹೊಡೆದುರುಳಿಸಲಾಗಿತ್ತು ಎಂದು ಶನಿವಾರ ಹೇಳಿದೆ. 
ಉಕ್ರೇನ್ ವಿಮಾನ ಪತನ: ತಪ್ಪು ಗ್ರಹಿಕೆಯಿಂದ ವಿಮಾನ ಹೊಡೆದುರುಳಿಸಲಾಗಿತ್ತು; ತಪ್ಪೊಪ್ಪಿಕೊಂಡ ಇರಾನ್
ಉಕ್ರೇನ್ ವಿಮಾನ ಪತನ: ತಪ್ಪು ಗ್ರಹಿಕೆಯಿಂದ ವಿಮಾನ ಹೊಡೆದುರುಳಿಸಲಾಗಿತ್ತು; ತಪ್ಪೊಪ್ಪಿಕೊಂಡ ಇರಾನ್

ತೆಹ್ರಾನ್: ವಿಶ್ವದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಇರಾನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತಪ್ಪು ಗ್ರಹಿಕೆಯಿಂದಾಗಿ ವಿಮಾನ ಹೊಡೆದುರುಳಿಸಲಾಗಿತ್ತು ಎಂದು ಶನಿವಾರ ಹೇಳಿದೆ. 

ದುರ್ಘಟನೆ ಸಂಬಂಧ ಇಂದು ಹೇಳಿಕೆ ಬಿಡುಗಡೆ ಮಾಡಿರುವ ಇರಾನ್, ವಿಮಾನ ಪತನಕ್ಕೆ ಸೇನಾಪಡೆಯ ತಪ್ಪು ಗ್ರಹಿಕೆಯೇ ಕಾರಣ ಎಂದು ಹೇಳಿದೆ. 

ಬೋಯಿಂಗ್ 737 ಸರಣಿ ಉಕ್ರೇನ್ ವಿಮಾನ ಕಳೆದ ಬುಧವಾಕ ಬೆಳಿಕ್ಕೆ ಇರಾನ್ ನ ತೆಹ್ರಾನ್ ಇಮಾಮ್ ಕೊಮೆನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಉಕ್ರೇನ್'ನ ಕೈವ್ ಬೋರಿಸ್ ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ, ಟೇಕಾಪ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನನಿಲ್ದಾಣದಲ ಬಳಿ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ 176 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. 

ವಿಮಾನ ಪತನಗೊಂಡ ಹಿನ್ನೆಲೆಯಲ್ಲಿ ಆರಂಭದಲ್ಲಿ ಇದನ್ನು ತಾಂತ್ರಿಕ ದೋಷವೆಂದೇ ಹೇಳಲಾಗುತ್ತಿತ್ತು. ಇದರನ್ನು ಉಕ್ರೇನ್ ಹಾಗೂ ಇರಾನ್ ಅಧಿಕಾರಿಗಳು ವಾದಿಸಿದ್ದರು. ಆದರೆ, ವಿಮಾನ ಟೇತಾಱ್ ಆದುವ ಮುನ್ನವೇ ಅಮೆರಿಕಾ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದ್ದು, ಕೆಲ ಅನುಮಾನಗಳನ್ನು ಹುಟ್ಟು ಹಾಕಿತ್ತು. 

ಇದಾದ ಬಳಿಕ ಉಕ್ರೇನ್ ಕೂಡ ವಿಮಾನದ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿತ್ತು. ಅಲ್ಲದೆ, ತನಿಖೆಗೆ ಆದೇಶಿಸಿತ್ತು. 

ನಂತರ ಅಮೆರಿಕಾ ಪ್ರತಿಕ್ರಿಯೆ ನೀಡಿ, ಇರಾನ್ ಮೇಲೆ ಆರೋಪ ಮಾಡಿತ್ತು. ತಪ್ಪಾದ ಗ್ರಹಿಕೆಯಿಂದಾಗಿ ಇರಾನ್ ವಿಮಾನವನ್ನು ಹೊಡೆದುರುಳಿಸಿತ್ತು ಎಂದು ಹೇಳಿದ್ದರು. ಆದರೆ, ಇದನ್ನು ಇರಾನ್ ಒಪ್ಪಿಕೊಳ್ಳದೆ, ತಿರಸ್ಕರಿಸುತ್ತಾ ಬಂದಿತ್ತು. ಇದೀಗ ವಿಮಾನ ಪತನಕ್ಕೆ ತನ್ನ ಸೇನೆಯ ತಪ್ಪು ಗ್ರಹಿಕೆಯೇ ಕಾರಣ ಎಂದು ಒಪ್ಪಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com