ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ: 41ಕ್ಕೇರಿದ ಸಾವಿನ ಸಂಖ್ಯೆ, 1,280 ಮಂದಿಯಲ್ಲಿ ವೈರಾಣು ಪತ್ತೆ

ಚೀನಾದಲ್ಲಿ ಮರಣಮೃದಂಗವನ್ನು ಮುಂದುವರೆಸಿರುವ ಕೊರೋನಾ ವೈರಸ್, ಮತ್ತೆ 9 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಇದರಂತೆ ವೈರಸ್ ನಿಂದಾಗಿ ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಚೀನಾದಲ್ಲಿ ಮರಣಮೃದಂಗವನ್ನು ಮುಂದುವರೆಸಿರುವ ಕೊರೋನಾ ವೈರಸ್, ಮತ್ತೆ 9 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಇದರಂತೆ ವೈರಸ್ ನಿಂದಾಗಿ ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. 

ಇದೇ ವೇಳೆ 1,280 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಚೀನಾದಲ್ಲಿ ತೀವ್ರ ಆತಂಕದ ವಾತಾವರಣಗಳು ಕಂಡು ಬರುತ್ತಿದೆ. 

ವೈರಾಣು ಬಾಧೆ ಮತ್ತಷ್ಟು ವ್ಯಾಪಿಸುವುದನ್ನು ತಡೆಯುವ ಸಲುವಾಗಿ ಚೀನಾ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಅದರ ಹೊರತಾಗಿಯೂ ವೈರಾಣು ಹಬ್ಬುವುದು ಮಾಂತ್ರ ನಿಯಂತ್ರಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ 5 ನಗರಗಳಲ್ಲಿ ಗುರುವಾರ ಬಂದ್ ಘೋಷಿಸಿದ್ದ ಚೀನಾ ಸರ್ಕಾರ, ಅದನ್ನು ಶುಕ್ರವಾರ 13 ನಗರಗಳಿಗೆ ವಿಸ್ತರಣೆ ಮಾಡಿದ. ಇದರಿಂದಾಗಿ ಒಟ್ಟು 4.1 ಕೋಟಿ ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ. 

ಕ್ಸಿಯಾನ್ನಿಂಗ್, ಕ್ಸಿಯಾವ್ ಗಾನ್, ಎನ್ಶಿ ಹಾಗೂ ಝಿಜಿಯಾಂಗ್ ಸೇರಿದಂತೆ 13 ನಗರಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಝಿಜಿಯಾಂಗ್ ನಲ್ಲಿ ಔಷಧ ಅಂಗಡಿ ಬಿಟ್ಟು ಉಳಿದೆಲ್ಲಾ ಮಳಿಗೆಗಳನ್ನು ಮುಚ್ಚಿಸಲಾಗಿದೆ. 

ಎನ್ಶಿಯಲ್ಲಿ ಲ್ಲಾ ಮನರಂಜನೆ ತಾಣಗಳಿಗೆ ಬಾಗಿಲು ಎಳೆಯಲಾಗಿದೆ. ಉಳಿದಂತೆ ನಗರಗಳಲ್ಲಿ ರೈಲು, ಬಸ್, ದೋಣಿ ಸಂಚಾರ, ಪ್ರವಾಸ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಜ.25ರಂದು ಚೀನಾ ಜನರಿಗೆ ಹೊಸ ವರ್ಷವಾಗಿರುವ ಸಾಕಷ್ಟು ಸಂಖ್ಯೆ ಜನರು ವಿವಿಧೆಡೆಯಿಂದ ಆಗಮಿಸುತ್ತಾರೆ. ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ. ಇದೀಗ ಸರ್ಕಾರ ಬಂದ್ ಘೋಷಿಸಿರುವುದರಿಂದ ಅವುಗಳಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com