ನಿಮ್ಮ ಆಯುಧಗಳಿಗೆ ಹೆದರುವುದಿಲ್ಲ: ಚೀನಾಗೆ ಅಮೆರಿಕಾ ನೌಕಾ ಪಡೆ ಪ್ರತಿಕ್ರಿಯೆ!

ಅಮೆರಿಕಾದ ಯುದ್ಧ ನೌಕೆಗಳನ್ನು ಧ್ವಂಸಗೊಳಿಸುವ ಶಸ್ತ್ರಾಸ್ತ್ರ ಭಂಡಾರ ತನ್ನ ಬಳಿಯಿದೆ ಎಂದು ಹೇಳುವ ವರದಿಗೆ ಅಮೆರಿಕಾ ನೌಕಾಪಡೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಚೀನಾ ಆಯುಧ ನೋಡಿ ಹೆದರುವುದಿಲ್ಲ ಎಂದು ಟ್ವೀಟ್ ಮೂಲಕ ತಿರುಗೇಟು ಹೇಳಿದೆ.
ಚೀನಾ ಯುದ್ಧನೌಕೆ
ಚೀನಾ ಯುದ್ಧನೌಕೆ

ವಾಷಿಂಗ್ಟನ್: ಅಮೆರಿಕಾದ ಯುದ್ಧ ನೌಕೆಗಳನ್ನು ಧ್ವಂಸಗೊಳಿಸುವ ಶಸ್ತ್ರಾಸ್ತ್ರ ಭಂಡಾರ ತನ್ನ ಬಳಿಯಿದೆ ಎಂದು ಹೇಳುವ ವರದಿಗೆ ಅಮೆರಿಕಾ ನೌಕಾಪಡೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಚೀನಾ ಆಯುಧ ನೋಡಿ ಹೆದರುವುದಿಲ್ಲ ಎಂದು ಟ್ವೀಟ್ ಮೂಲಕ ತಿರುಗೇಟು ಹೇಳಿದೆ.

ಇತ್ತೀಚಿಗೆ ತನ್ನ ಎರಡು ಯುದ್ದ ನೌಕೆಗಳಾದ ಯು ಎಸ್‌ಎಸ್ ನಿಮಿಟ್ಜ್, ರೊನಾಲ್ಡ್ ರೇಗನ್ ( ಯುದ್ದ ವಿಮಾನ ಸಾಗಿಸುವ ನೌಕೆಗಳು) ಗಳನ್ನು ಅಮೆರಿಕಾ ದಕ್ಷಿಣ ಚೀನಾ ಸಮುದ್ರ ಪ್ರದೇಶಕ್ಕೆ ರವಾನಿಸಿದೆ. 

ಚೀನಾ ನೌಕಾ ಪಡೆ ಆ ಸಮುದ್ರದಲ್ಲಿ ಸಮರ ಅಭ್ಯಾಸ ನಡೆಸುತ್ತಿದ್ದ ಸಮಯದಲ್ಲೇ ಅಮೆರಿಕಾ ತನ್ನ ಯುದ್ದ ವಿಮಾನಗಳನ್ನು ಅಲ್ಲಿಗೆ ರವಾನಿಸಿದೆ. ಚೀನಾದ ಅತಿ ಕ್ರಮಣಗಳಿಗೆ ತಡೆಯೊಡ್ಡಲು ಅಮೆರಿಕಾ ಈ ಕ್ರಮ ಕೈಗೊಂಡಿದೆ.

ಈ ಹಿನ್ನಲೆಯಲ್ಲಿ ಚೀನಾ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಟ್ವೀಟ್ ಮಾಡಿ, ಅಮೆರಿಕಾದ ಯುದ್ದ ವಿಮಾನಗಳನ್ನು ದ್ವಂಸಗೊಳಿಸುವಂತಹ ಡಿಎಫ್ -೨೧ಡಿ, ಡಿಎಫ್-೨೬ ಕ್ಷಿಪಣಿಗಳು ಚೀನಾ ಬಳಿಯಿವೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಪೂರ್ಣ ಅಧಿಕಾರ ಹೊಂದಿದೆ ಎಂದು ಅಮೆರಿಕಾಗೆ ಎಚ್ಚರಿಸುವ ಪ್ರಯತ್ನ ಮಾಡಿದೆ. 

ಆದರೆ, ಅಮೆರಿಕಾ ನೌಕಾ ಪಡೆ ಇದಕ್ಕೆ ದಿಟ್ಟವಾಗಿ ಪ್ರತಿಕ್ರಯಿಸಿದ್ದು, ಹೌದಾ.. ಅಲ್ಲಿ ಅಮೆರಿಕಾಗೆ ಸೇರಿದ ಎರಡು ಯುದ್ದ ನೌಕೆಗಳಿವೆ.. ನಾವು ಹೆದರುವುದಿಲ್ಲ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com