ಭಾರತೀಯ ಸೈನಿಕರ 'ಆಕ್ರಮಣಶೀಲತೆ, ಲಜ್ಜೆಗೇಡಿತನ' ಗಾಲ್ವಾನ್ ಸಂಘರ್ಷಕ್ಕೆ ಕಾರಣ: ಚೀನಾ ವಿದೇಶಾಂಗ ಸಚಿವ ವಾಂಗ್ ಯೀ

ಗಾಲ್ವಾನ್ ಸಂಘರ್ಷಕ್ಕೆ ಭಾರತೀಯ ಸೈನಿಕರ ಆಕ್ರಮಣಶೀಲತೆಯೇ ಕಾರಣ. ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ಚಾಲ್ತಿಯಲ್ಲಿರುವಾಗಲೇ ಸೈನಿಕರು ಲಜ್ಜೆಗೆಟ್ಟವರಂತೆ ವರ್ತಿಸಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಹೇಳಿದ್ದಾರೆ. 
ಚೀನಾ ವಿದೇಶಾಂಗ ಸಚಿವ ವಾಂಗ್ ಯೀ
ಚೀನಾ ವಿದೇಶಾಂಗ ಸಚಿವ ವಾಂಗ್ ಯೀ

ನವದೆಹಲಿ: ಗಾಲ್ವಾನ್ ಸಂಘರ್ಷಕ್ಕೆ ಭಾರತೀಯ ಸೈನಿಕರ ಆಕ್ರಮಣಶೀಲತೆಯೇ ಕಾರಣ. ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ಚಾಲ್ತಿಯಲ್ಲಿರುವಾಗಲೇ ಸೈನಿಕರು ಲಜ್ಜೆಗೆಟ್ಟವರಂತೆ ವರ್ತಿಸಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಹೇಳಿದ್ದಾರೆ. 

ಭಾರತ-ಚೀನಾ ಗಡಿ ಪ್ರದೇಶ ಲಡಾಖ್ ನ ಗಾಲ್ವಾನ್ ನಲ್ಲಿ ನಡೆದ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇಂದು ದೂರವಾಣಿ ಕರೆ ಮೂಲಕ ಚರ್ಚೆ ನಡೆಸಿದರು. ಈ ವೇಳೆ ಭಾರತೀಯ ಸೈನಿಕರ ಆಕ್ರಮಣಕಾರಿ ಮನೋಭಾವದ ಕುರಿತು ತೀವ್ರ ಅಸಮಾಧನ ವ್ಯಕ್ತಪಡಿಸಿದ ವಾಂಗ್ ಯೀ, ಭಾರತ ಸರ್ಕಾರ ಕೂಡಲೇ ತನ್ನ ಸೈನಿಕರ ಪ್ರಚೋದನಾತ್ಮಕ ನಡೆಗೆ ಕೂಡಲೇ ಬ್ರೇಕ್ ಹಾಕಬೇಕು. ಅಲ್ಲದೆ ಗಾಲ್ವಾನ್ ಸಂಘರ್ಷ ಸಂಬಂಧ ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥ ಸೈನಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಚೀನಾ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, 'ಭಾರತೀಯ ಸೈನಿಕರ ಆಕ್ರಮಣಶೀಲತೆಯೇ ಸಂಘರ್ಷಕ್ಕೆ ಕಾರಣ ಎಂದು ಹೇಳಿರುವ ವಾಂಗ್ ಯೀ, ಭಾರತೀಯ ಸೈನಿಕರೇ ಮೊದಲು ವಿವಾದಿತ ಗಡಿ ಪ್ರದೇಶವನ್ನು ಪ್ರವೇಶ ಮಾಡುವ ಸಾಹಸ ಮಾಡಿದ್ದು, ಇದು ಸಂಘರ್ಷಕ್ಕೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ.  ಅಲ್ಲದೆ ಭಾರತ ಸರ್ಕಾರ ಕೂಡಲೇ ತನ್ನ ಸೈನಿಕರ ಪ್ರಚೋದನಾತ್ಮಕ ನಡೆಗೆ ಕೂಡಲೇ ಬ್ರೇಕ್ ಹಾಕಬೇಕು. ಅಲ್ಲದೆ ಗಾಲ್ವಾನ್ ಸಂಘರ್ಷ ಸಂಬಂಧ ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥ ಸೈನಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರಕಳಿಸದಂತೆ ಭಾರತ ಸರ್ಕಾರ ವಿಶ್ವಾಸ ಮೂಡಿಸಬೇಕು ಎಂದು ಒತ್ತಾಯಿಸಿದೆ. 

ಶಾಂತಿ ಮಾತುಕತೆ ಚಾಲ್ತಿಯಲ್ಲಿರುವಾಗಲೇ ಸೈನಿಕರು ಲಜ್ಜೆಗೆಟ್ಟವರಂತೆ ವರ್ತಿಸಿದ್ದಾರೆ. ಗಾಲ್ವಾನ್ ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದಾಗ ಭಾರತೀಯ ಸೈನಿಕರು ಅನಾವಶ್ಯಕವಾಗಿ ವಿವಾಧಿತ ಭೂ ಪ್ರದೇಶವನ್ನು ಅಕ್ರಮಿಸಿಕೊಳ್ಳುವ ಮೂಲಕ ಚೀನಾ ಸೈನಿಕರನ್ನು ಪ್ರಚೋದಿಸಿದ್ದಾರೆ. ಇದು ಚೀನಾ ಸೇನಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿ ವಾಗ್ವಾದ ನಡೆದು ಸಂಘರ್ಷಕ್ಕೆ ದಾರಿ ಮಾಡಿದೆ ಎಂದು ವಾಂಗ್ ಯೀ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com