ಚೀನಾ 'ನಟ ಭಯಂಕರ: ಭಾರತೀಯ ಯೋಧರ ಬಲಿದಾನಕ್ಕೆ ಕಣ್ಣೀರು ಹಾಕಿದ ಅಮೆರಿಕಾ!

ಭಾರತದ ಗಡಿಯಲ್ಲಿ ಉದ್ವಿಗ್ನತೆಗೆ ಕಾರಣವಾಗಿರುವ ಚೀನಾ ಸೇನಾಪಡೆಗಳ ನಡೆಯನ್ನು ಟೀಕಿಸಿರುವ ಅಮೆರಿಕ, ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷ ನಟ ರಾಕ್ಷಸ ಎಂದು ಬಣ್ಣಿಸಿದೆ.
ಮೈಕ್ ಪೊಂಪಿಯೋ
ಮೈಕ್ ಪೊಂಪಿಯೋ

ವಾಷಿಂಗ್ಟನ್: ಭಾರತದ ಗಡಿಯಲ್ಲಿ ಉದ್ವಿಗ್ನತೆಗೆ ಕಾರಣವಾಗಿರುವ ಚೀನಾ ಸೇನಾಪಡೆಗಳ ನಡೆಯನ್ನು ಟೀಕಿಸಿರುವ ಅಮೆರಿಕ, ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷ ನಟ ರಾಕ್ಷಸ ಎಂದು ಬಣ್ಣಿಸಿದೆ.

ಚೀನಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ, ಚೀನಾದ ಕಮ್ಯುನಿಸ್ಟ್ ಪಕ್ಷವು ನ್ಯಾಟೋನಂತಹ ಸಂಸ್ಥೆಗಳ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರಗಳು ಮಾಡಿದ ಎಲ್ಲಾ ಪ್ರಗತಿಯನ್ನು ರದ್ದುಗೊಳಿಸಲು ಮತ್ತು ಬೀಜಿಂಗ್‌ಗೆ ಅನುಗುಣವಾಗಿ ಹೊಸ ನಿಯಮಗಳು ಮತ್ತು ಆಡಳಿತವನ್ನು ಅಳವಡಿಸಿಕೊಳ್ಳಲು ಬಯಸಿದೆ ಎಂದಿದ್ದಾರೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ  ಭಾರತದ ಗಡಿಯಲ್ಲಿ ಪಿಎಲ್ ಎ ( ಪೀಪಲ್ಸ್ ಲಿಬರೇಷನ್ ಆರ್ಮಿ) ಉದ್ವಿಗ್ನತೆಯನ್ನು ಉಂಟು ಮಾಡಿದೆ. ಇದು ದಕ್ಷಿಣ ಚೀನಾ ಸಮುದ್ರವನ್ನು ಮಿಲಿಟರೀಕರಣಗೊಳಿಸುತ್ತಿದೆ ಮತ್ತು ಕಾನೂನುಬಾಹಿರವಾಗಿ ಅಲ್ಲಿ ಹೆಚ್ಚಿನ ಪ್ರದೇಶವನ್ನು ಪಡೆದುಕೊಳ್ಳುತ್ತಿದೆ, ಪ್ರಮುಖ ಸಮುದ್ರ ಪಥಗಳಿಗೆ ಬೆದರಿಕೆ ಹಾಕುತ್ತಿದೆ ಎಂದು ಹೇಳಿರುವ ಪೊಂಪಿಯೋ, ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನಾಪಡೆಗಳ ನಡುವಿನ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. 

2020 ರ ಕೋಪನ್ ಹ್ಯಾಗನ್ ಪ್ರಜಾಪ್ರಭುತ್ವ ಶೃಂಗಸಭೆಯಲ್ಲಿ ಶುಕ್ರವಾರ ,ಯುರೋಪ್ ಮತ್ತು ಚೀನಾ ಸವಾಲುಗಳ ಕುರಿತಂತೆ ಮಾತನಾಡಿದ ಅಮೆರಿಕಾದ ಉನ್ನತ ರಾಯಬಾರಿ, ಅನೇಕ ವರ್ಷಗಳಿಂದ, ಪಶ್ಚಿಮವು ಭರವಸೆಯ ಯುಗದಲ್ಲಿ, ಚೀನೀ ಕಮ್ಯುನಿಸ್ಟ್ ಪಕ್ಷವನ್ನು ಬದಲಾಯಿಸಬಹುದು ಮತ್ತು ಚೀನಾದ ಜನರ ಜೀವನವನ್ನು ಸುಧಾರಿಸಬಹುದು ಎಂದು ನಂಬಿದ್ದರು. ಈ ಹಾದಿಯಲ್ಲಿ ನಮ್ಮ ಒಳ್ಳೆತನವನ್ನು ಕಮ್ಯೂನಿಸ್ಟ್ ಪಕ್ಷ ಬಳಸಿಕೊಂಡಿದೆ.

ಕಳೆದ ದಶಕದಲ್ಲಿ ಯುರೋಪಿಯನ್ ಮತ್ತು ಅಮೆರಿಕಾದ ಕಂಪನಿಗಳು ಚೀನಾದಲ್ಲಿ ದೊಡ್ಡ ಆಶವಾದದೊಂದಿಗೆ ಹೊಡಿಕೆ ಮಾಡಿವೆ. ಪಿಎಲ್‌ಎ-ಸಂಯೋಜಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳನ್ನು ತೆರೆದಿದೆ ಮತ್ತು ತಮ್ಮ ದೇಶಗಳಲ್ಲಿ ಚೀನಾ ಬೆಂಬಲಿತ ಹೂಡಿಕೆಯನ್ನು ಸ್ವಾಗತಿಸಲಾಗಿದೆ. ಆದರೆ, ಕಮ್ಯೂನಿಸ್ಟ್ ಪಕ್ಷ ಹಾಂಗ್ ಕಾಂಗ್ ನಲ್ಲಿ ಸ್ವಾತಂತ್ರ್ಯವನ್ನು ಕೊನೆಗೊಳಿಸಲು ನಿರ್ಧರಿಸಿತು. ವಿಶ್ವಸಂಸ್ಥೆಯ ಒಪ್ಪಂದ ಮತ್ತು ಅದರ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದರು.

ಕ್ಸಿ ಜಿನ್‌ಪಿಂಗ್  ಚೀನಾದ ಮುಸ್ಲಿಮರ ವಿರುದ್ಧದ ಕ್ರೂರ ದಬ್ಬಾಳಿಕೆಯ ಅಭಿಯಾನಕ್ಕೆ ಹಸಿರು ನಿಶಾನೆ ನೀಡಿದ್ದಾರೆ.ಎರಡನೇ ಮಹಾಯುದ್ಧದ ನಂತರ ನಾವು ನೋಡಿರದ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈಗ, ಪಿಎಲ್‌ಎ ಭಾರತದೊಂದಿಗೆ ಗಡಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಎಂದು ಪೊಂಪಿಯೋ ಹೇಳಿದರು. 

1967ರ ನಾಥುಲಾದಲ್ಲಿ ನಡೆದ ಘರ್ಷಣೆಯ ನಂತರ ಇದೀಗ ಗಲ್ವಾನ್ ನಲ್ಲಿ ಉಭಯ ದೇಶಗಳ ಸೇನಾಪಡೆಗಳ ನಡುವೆ ದೊಡ್ಡ ಘರ್ಷಣೆ ನಡೆದಿದೆ. ಆಗ ಭಾರತದ 80 ಯೋಧರು ಬಲಿಯಾದರೆ, ಚೀನಾ ಸೈನಿಕರ ಸಂಖ್ಯೆ 300ಕ್ಕೆ ಏರಿಕೆ ಆಗಿತ್ತು. ಗಲ್ವಾನ್ ನ ವಾಸ್ತವಿಕ ನಿಯಂತ್ರಣ ರೇಖೆ ಬಳಿ ಚೀನಾಪಡೆಗಳು ಕಲ್ಲು,ದೊಣ್ಣೆ ಹಾಗೂ ಕಬ್ಬಿಣದ ರಾಡುಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಂಪಿಯೋ ಹೇಳಿದರು. 
     
ಕಮ್ಯೂನಿಸ್ಟ್ ಪಕ್ಷ ತನ್ನ ನೆರೆಹೊರೆಯವರೊಂದಿಗೆ ನಟ ರಾಕ್ಷಸನಾಗಿಲ್ಲ, ಕೊರೋನಾವೈರಸ್ ಹರಡುವ ಮೂಲಕ ಉಳಿದ ರಾಷ್ಟ್ರಗಳಲ್ಲಿ ಸಾವಿರಾರು ಜನರು ಸಾವಿಗೆ ಹಾಗೂ ಜಾಗತಿಕವಾಗಿ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂದು ಪೊಂಪಿಯೋ ತಿಳಿಸಿದರು. ಈ ಸೋಂಕು ಹುಟ್ಟಿಕೊಂಡು ಅನೇಕ ತಿಂಗಳುಗಳು ಕಳೆದಿದ್ದರೂ ವುಹಾನ್  ರೋಗಿಗಳ ಬಗ್ಗೆ ಮಾಹಿತಿ ನೀಡಿಲ್ಲ, ಜೀವಂತ ವೈರಸ್ ಮಾದರಿಗಳನ್ನು ಪೂರೈಸಿಲ್ಲ ಎಂದು ಪೊಂಪಿಯೋ ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com