ಚೀನಾ ಪ್ರಾಬಲ್ಯ ಎದುರಿಸಲು ಭಾರತ-ಅಮೆರಿಕಾ ಜಂಟಿ ಯೋಜನೆ ಸಿದ್ದವಾಗಬೇಕು: ಯುಎಸ್ ತಜ್ಞರ ಸಮಿತಿ ಆಶಯ

ಕೊರೋನಾವೈರಸ್ ರೋಗದಿಂದಾಗಿ ತಮ್ಮ ಆರ್ಥಿಕ ಸಂಕಷ್ಟಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ ಪಾಕಿಸ್ತಾನ ಮತ್ತು ಶ್ರೀಲಂಕಾದೊಂದಿಗಿನ ಸಂಬಂಧ ಗಟ್ಟಿಗೊಳಿಸುವ ಯೋಜನೆಯೊಡನೆ ಹಿಂದೂ ಮಹಾಸಾಗರದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ಚೀನಾ ಹುನ್ನಾರ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನ್ಯೂಯಾರ್ಕ್: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಆರ್ಥಿಕ ಸಂಕಷ್ಟಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ ಪಾಕಿಸ್ತಾನ ಮತ್ತು ಶ್ರೀಲಂಕಾದೊಂದಿಗಿನ ಸಂಬಂಧ ಗಟ್ಟಿಗೊಳಿಸುವ ಯೋಜನೆಯೊಡನೆ ಹಿಂದೂ ಮಹಾಸಾಗರದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ಚೀನಾ ಹುನ್ನಾರವನ್ನು ಎದುರಿಸಲು ಅಮೆರಿಕಾ ಹಾಗೂ ಭಾರತ ಯೋಜನೆಯನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಅಮೆರಿಕಾ ತಜ್ಞರ ಸಮಿತಿ ಹೇಳಿದೆ.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಪ್ರಬಾವ ಹೆಚ್ಚುತ್ತಿರುವ ಬಗ್ಗೆ ಭಾರತದಲ್ಲಿ ಸಾಕಷ್ಟು ಕಳವಳಗಳಿವೆ. ಶ್ರೀಲಂಕಾ, ಮಾಲ್ಡೀವ್ಸ್, ಇಂಡೋನೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ, ಮ್ಯಾನ್ಮಾರ್ ಮತ್ತು ಸಿಂಗಾಪುರ ಸೇರಿದಂತೆ ಈ ಭಾಗದಲ್ಲಿನ ದೇಶದೊಡನೆ ಸಾಗರ ವಲಯ ಸಹಕಾರ  ವಿಸ್ತರಿಸಲು ಭಾರತ ಪ್ರಯತ್ನಿಸುತ್ತಿದೆ, ಮುಖ್ಯವಾಗಿ ಬೆಳೆಯುತ್ತಿರುವ ಚೀನಾದ ದಾರ್ಷ್ಟ್ಯತೆಯನ್ನು ಗಮನಿಸುವ ಉದ್ದೇಶದಿಂದ ಭಾರತ ಕೆಲಸ ಮಾಡುತ್ತಿದೆ.

ಹಡ್ಸನ್ ಇನ್ಸ್ಟಿಟ್ಯೂಟ್ ಥಿಂಕ್-ಟ್ಯಾಂಕ್ ಪ್ರಕಾರ, ಕೊರೋನಾವೈರಸ್  ಸಾಂಕ್ರಾಮಿಕವು ದಕ್ಷಿಣ ಏಷ್ಯಾದ ಜೀವನ ಮತ್ತು ಜೀವನೋಪಾಯಕ್ಕೆ ಮಾತ್ರವಲ್ಲ; ಇದು ಈ ಪ್ರದೇಶದ ಗಮನಾರ್ಹ ರಾಜಕೀಯ ಮತ್ತು ಕಾರ್ಯತಂತ್ರದ ಬದಲಾವಣೆಗಳಿಗೆ ನಾಂದಿ ಹಾಡಲಿದೆ.

ಬಾಂಗ್ಲಾದೇಶ ಮತ್ತು ಭಾರತೀಯ ಆರ್ಥಿಕತೆಗಳು ಅತ್ಯಂತ ವಿನಾಶಕಾರಿ ಅಪಾಯದಿಂದ ಪಾರಾಗಲಿದ್ದು ಇದಕ್ಕೆ ಆಯಾ ಸರ್ಕಾರಗಳು  ಹೂಡಿಕೆಯನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಮೂಲಕ ಬೆಳವಣಿಗೆಯನ್ನು ಪುನಃಸ್ಥಾಪಿಸಬೇಕಿದೆ ಎಂದು ಭಾರತೀಯ ಮೂಲದ ಹಡ್ಸನ್ ಸಂಶೋಧನಾ ವಿದ್ವಾಂಸ ಅಪರ್ಣಾ ಪಾಂಡೆ ಮತ್ತು ಅಮೆರಿಕದ ಮಾಜಿ ಪಾಕಿಸ್ತಾನ ರಾಯಭಾರಿ ಹುಸೈನ್ ಹಕ್ಕಾನಿ ಜಂಟಿಯಾಗಿ ಬರೆದಿರುವ ವರದಿಯಲ್ಲಿ ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com