ಪಿಪಿಇ ಕಿಟ್ ಕೊರತೆ: ಬ್ರಿಟನ್ ಸರ್ಕಾರದ ವಿರುದ್ಧ ಭಾರತ ಮೂಲದ ಗರ್ಭಿಣಿ ವೈದ್ಯೆ ಪ್ರತಿಭಟನೆ, ಕ್ರೌಡ್ ಫಂಡಿಂಗ್ ನಿಂದ 53 ಸಾವಿರ ಪೌಂಡ್ ಶೇಖರಣೆ

ಕೊವಿಡ್ -19 ವಿರುದ್ಧ ಹೋರಾಡುತ್ತಿರುವ ಭಾರತೀಯ ಮೂಲದ ಗರ್ಭಿಣಿ ವೈದ್ಯೆಯೊಬ್ಬರು ವೈದ್ಯರಿಗೆ ಬೇಕಾದ ವೈಯಕ್ತಿಕ ಸುರಕ್ಷಾ ಸಾಧನಗಳ(ಪಿಪಿಇ) ಕಿಟ್ ಕೊರತೆಯನ್ನು ಖಂಡಿಸಿ ಬ್ರಿಟನ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. 
ವೈದ್ಯೆ ಮಿನಾಲ್ ವಿಜ್ ಪ್ರತಿಭಟನೆ
ವೈದ್ಯೆ ಮಿನಾಲ್ ವಿಜ್ ಪ್ರತಿಭಟನೆ

ಲಂಡನ್: ಕೊವಿಡ್ -19 ವಿರುದ್ಧ ಹೋರಾಡುತ್ತಿರುವ ಭಾರತೀಯ ಮೂಲದ ಗರ್ಭಿಣಿ ವೈದ್ಯೆಯೊಬ್ಬರು ವೈದ್ಯರಿಗೆ ಬೇಕಾದ ವೈಯಕ್ತಿಕ ಸುರಕ್ಷಾ ಸಾಧನಗಳ(ಪಿಪಿಇ) ಕಿಟ್ ಕೊರತೆಯನ್ನು ಖಂಡಿಸಿ ಬ್ರಿಟನ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. 

ಮಾರಕ ಕೊರೋನಾ ವೈರಸ್ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ವೈದ್ಯರಿಗೆ ಸರ್ಕಾರ ಸೂಕ್ತ ಸುರಕ್ಷತಾ ಪರಿಕರಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಭಾರತೀಯ ಮೂಲದ ವೈದ್ಯೆ ಡಾ. ಮೀನಾಲ್ ವಿಜ್ ಅವರು ಬ್ರಿಟನ್ ಪ್ರಧಾನಿ ಕಚೇರಿ ಮುಂದೆ ಪ್ರತಿಭಟನೆ  ನಡೆಸಿದ್ದಾರೆ. ಅಲ್ಲದೆ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಗರ್ಭಿಣಿ ಕೂಡ ಆಗಿರುವ ಮಿನಾಲಿ ವಿಜ್ ಅವರು, ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ. 

ಕೊರೋನಾ ವೈರಸ್ ಲಾಕ್‌ಡೌನ್ ಮಧ್ಯೆ ಬ್ರಿಟನ್ ನ ರಾಷ್ಟ್ರೀಯ ಆರೋಗ್ಯ ಸೇವೆಯ ವೈದ್ಯರು ಪಿಪಿಇ ಕಿಟ್ ವಿಶೇಷವಾಗಿ ಸರ್ಜಿಕಲ್ ಗೌನ್ಸ್ ಕೊರತೆ ಎದುರಿಸುತ್ತಿದ್ದು, ಇದನ್ನು ಖಂಡಿಸಿ, 8 ತಿಂಗಳ ಗರ್ಭಿಣಿ ಡಾ. ಮೀನಾಲ್ ವಿಜ್ ಎಂಬುವವರು ಮಾಸ್ಕ್ ಧರಿಸಿ ಪ್ರಧಾನಿ ಕಚೇರಿ ಮುಂದೆ  ಪ್ರತಿಭಟನೆ ನಡೆಸಿದ್ದಾರೆ. "ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಿ" ಎಂಬ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ 27 ವರ್ಷದ ಡಾ. ಮೀನಾಲ್ ಅವರು, "ಸರ್ಕಾರ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ" ಎಂದು ಒತ್ತಾಯಿಸಿದ್ದಾರೆ. ಕೊವಿಡ್-19 ವಿರುದ್ಧ ಮುಂಚೂಣಿಯಲ್ಲಿ ಕೆಲಸ  ಮಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ, ಟರ್ಕಿಯಿಂದ ಪಿಪಿಇ ಕಿಟ್ ಬರಬೇಕಾಗಿದೆ. ಪಿಪಿಇ ಕಿಟ್ ಬರುವುದು ವಿಳಂಬವಾಗಿದೆ ಎಂದು ಬಿಎಂಎ ಕೌನ್ಸಿಲ್ ಅಧ್ಯಕ್ಷ ಡಾ.ಚಂದ್ ನಾಗ್ಪಾಲ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇದೀಗ ವೈದ್ಯರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ನಾಗರಿಕರು ಕ್ರೌಡ್ ಫಂಡಿಂಗ್ ಮೂಲಕ 53 ಸಾವಿರ ಪೌಂಡ್ಸ್ ಹಣವನ್ನು ಶೇಖರಿಸಿದ್ದಾರೆ. ಮಿನಾಲ್ ವಿಜ್ ಅವರು 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಇದರ ಹೊರತಾಗಿಯೂ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.  ಮಿನಾಲ್ ವಿಜ್ ಅವರ ಹೋರಾಟಕ್ಕೆ ಇತರೆ ವೈದ್ಯಕೀಯ ಸಿಬ್ಬಂದಿಗಲು ಕೂಡ ಸಾಥ್ ನೀಡಿದ್ದು, 'ವೈದ್ಯರು ಹುತಾತ್ಮರಲ್ಲ' (Doctors, not Martyrs) ಎಂಬ ಬೋರ್ಡ್ ಹಿಡಿದು ಮೌನವಾಗಿಯೇ ಪ್ರತಿಭಟನೆ ನಡೆಸಿದ್ದಾರೆ. ಅಂತೆಯೇ ವಾರಾಂತ್ಯದ ಪ್ರತಿಭಟನೆ ವೇಳೆ ಚಪ್ಪಾಳೆ ತಟ್ಟುವ  ಮೂಲಕ ಆರೋಗ್ಯ ಕಾರ್ಯಕರ್ತರಿಗೆ ಬೆಂಬಲ ಸೂಚಿಸಲಾಯಿತು. ಸ್ವತಃ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ನಿನ್ನೆ ತಮ್ಮ ಅಧಿಕೃತ ನಿವಾಸದಿಂದ ಹೊರಬಂದು ಚಪ್ಪಾಳೆ ತಟ್ಟುವ ಮೂಲಕ ವೈದ್ಯಕೀಯ ಸಿಬ್ಬಂದಿಗಳಿಗೆ ನೈತಿಕ ಬೆಂಬಲ ನೀಡಿದರು.

ರಾಜಕಾರಣಿಗಳಿಂದ ಪ್ರತಿಭಟನೆಯ ಆಶಯವೇ ಹೈಜಾಕ್
ಇನ್ನು ತಮ್ಮ ಪ್ರತಿಭಟನೆಯ ಆಶಯವನ್ನು ರಾಜಕಾರಣಿಗಳು ಹೈಜಾಕ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವೈದ್ಯ ಮಿನಾಲ್ ವಿಜ್ ಅವರು, ನಿಮ್ಮ ಬೆಂಬಲವನ್ನು ನಾವು ಶ್ಲಾಘಿಸುತ್ತೇವೆ. ಆದರೆ ಚಪ್ಪಾಳೆ ತಟ್ಟುವ ಬದಲಿಗೆ ನಾನು ನನ್ನ 237 ವೈದ್ಯರ ಸಾವಿಗೆ ಮೌನಾಚರಣೆ  ಮಾಡುತ್ತೇನೆ ಎಂದು ಹೇಳುವ ಮೂಲಕ ಬೋರಿಸ್ ಜಾನ್ಸನ್ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯ ಸಮುದಾಯಕ್ಕೆ ಸುರಕ್ಷಾ ಸಲಕರಣೆಗಳ ಕೊರತೆ ಇದು ಎಂದು ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆ ಸರ್ಕಾರದ ಗಮನ ಸಳೆದಿತ್ತು. ಅಲ್ಲದೇ ಕೂಡಲೇ ಸೂಕ್ತ ವೈದ್ಯಕೀಯ ಸಲಕರಣೆಗಳನ್ನು ಒದಗಿಸುವಂತೆ  ಒತ್ತಾಯಿಸಿತ್ತು. ಮಿನಾಲ್ ವಿಜ್ ಮಾತ್ರವಲ್ಲದೇ ಅವರ ಪತಿ ನಿಶಾಂತ್ ಜೋಷಿ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ನ್ಯಾಯಾಂಗ ಪರಿಹಾರದ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ವೈದ್ಯರ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವೈದ್ಯ ಸಮೂಹ ಲಂಡನ್  ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದು, ಪಿಪಿಇ ಮತ್ತು ಸರ್ಜಿಕಲ್ ಗೌನ್ ಗಳ ವಿತರಣೆಗೆ ಅಗ್ರಹಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com