ಟ್ರಂಪ್ ನಡೆಸಿದ 18 ರ್ಯಾಲಿಗಳಿಂದ 30,000 ಜನರಿಗೆ ಕೊರೋನಾ ಸೋಂಕು, 700 ಸಾವು: ಸಮೀಕ್ಷೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೈಗೊಂಡಿದ್ದ 18 ರ್ಯಾಲಿಗಳಿಂದ ದೇಶದಲ್ಲಿ 30,000 ಜನರಿಗೆ ಸೋಂಕು ತಗುಲಿದ್ದು, 700 ಮಂದಿ ಸಾವನ್ನಪ್ಪಿದ್ದಾರೆಂದು ಸಮೀಕ್ಷೆಯೊಂದು ಹೇಳಿದೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೈಗೊಂಡಿದ್ದ 18 ರ್ಯಾಲಿಗಳಿಂದ ದೇಶದಲ್ಲಿ 30,000 ಜನರಿಗೆ ಸೋಂಕು ತಗುಲಿದ್ದು, 700 ಮಂದಿ ಸಾವನ್ನಪ್ಪಿದ್ದಾರೆಂದು ಸಮೀಕ್ಷೆಯೊಂದು ಹೇಳಿದೆ. 

ಸ್ಟ್ಯಾನ್‌ ಫೋರ್ಡ್ ವಿಶ್ವವಿದ್ಯಾಲಯ ಸಂಶೋಧಕರು ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. 

ಸಮೀಕ್ಷೆಯ ವರದಿಯಲ್ಲಿ ಟ್ರಂಪ್ ಅವರು ರ್ಯಾಲಿ ನಡೆಸಿದ ಸ್ಥಳಗಳಲ್ಲಿ ಅತೀ ಹೆಚ್ಚು ಸೋಂಕು ಹಾಗೂ ಸಾವುಗಳು ಸಂಭವಿಸಿವೆ ಎಂದು ಹೇಳಿದೆ. 

ಕೊರೋನಾ ವೈರಸ್ ಸೋಂಕು ಹೆಚ್ಚುವಲ್ಲಿ ಬೃಹತ್ ಸಭೆಗಳ ಪರಿಣಾಮ ಕುರಿತಂತೆ ಸ್ಟ್ಯಾನ್‌ ಫೋರ್ಡ್ ವಿಶ್ವವಿದ್ಯಾಲಯ ಸಮೀಕ್ಷೆ ನಡೆಸಿದ್ದು, ಜೂ.20ರಿಂದ ಸೆಪ್ಟೆಂಬರ್ 22ರವರೆಗೆ ಟ್ರಂಪ್ ರ್ಯಾಲಿ ನಡೆದಿದ್ದ ವಿವಿಧ ಪ್ರದೇಶಗಲ್ಲಿನ ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ. 

ಕೋವಿಡ್–19 ಬೃಹತ್ ಸಭೆಗಳಿಂದ ಸಮುದಾಯಕ್ಕೆ ಹರಡಲಿದೆ ಎಂಬ ಆರೋಗ್ಯ ಇಲಾಖೆ ಅಧಿಕಾರಿಗಳ ಆತಂಕವನ್ನು ನಮ್ಮ ಸಮೀಕ್ಷೆಯ ಅಂಕಿ ಅಂಶಗಳು ದೃಢಪಡಿಸುತ್ತವೆ. ಮುಖ್ಯವಾಗಿ ಅಂತರ ಕಾಪಾಡುವಿಕೆ, ಮಾಸ್ಕ್ ಧರಿಸುವ ಮನೋಭಾವ ಬಹುತೇಕ ಕಡಿಮೆ ಇತ್ತು. ಇದಕ್ಕಾಗಿ ಟ್ರಂಪ್ ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದ ಸಮುದಾಯ ದೊಡ್ಡ ಬೆಲೆ ತೆತ್ತಿದೆ ಎಂದು ತಿಳಿಸಿದೆ. 

ಸಮೀಕ್ಷೆಯ ವರದಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬೈಡನ್ ಅವರು, ಅಧ್ಯಕ್ಷ ಟ್ರಂಪ್ ಅವರಿಗೆ ನಿಮ್ಮ ಬಗ್ಗೆ ಕಾಳಜಿ ಇಲ್ಲ. ತಮ್ಮ ಬೆಂಬಲಿಗರ ಬಗ್ಗೆಯೂ ಅವರಿಗೆ ಕಾಳಜಿಯಿರಲಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com